ಅಂತಿಮ ಟ್ವೆಂಟಿ-20: ಆಸ್ಟ್ರೇಲಿಯ ವಿರುದ್ಧ ಭಾರತದ ಗೆಲುವಿಗೆ 187 ರನ್ ಗುರಿ
Update: 2020-12-08 15:47 IST
ಸಿಡ್ನಿ: ಇಲ್ಲಿ ಮಂಗಳವಾರ ನಡೆಯುತ್ತಿರುವ ಮೂರನೇ ಮತ್ತು ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡವು ಭಾರತ ವಿರುದ್ಧ ಉತ್ತಮ ಮೊತ್ತ ದಾಖಲಿಸಿದ್ದು, ಭಾರತದ ಗೆಲುವಿಗೆ 187 ರನ್ ಗಳ ಗುರಿ ನೀಡಿದೆ.
ಕ್ಲೀನ್ ಸ್ವೀಪ್ ಗುರಿಯೊಂದಿಗೆ ಪಂದ್ಯ ಆರಂಭಿಸಿದ ಕೊಹ್ಲಿ ಪಡೆ ಟಾಸ್ ಗೆದ್ದು ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯ ನಿಗದಿತ 20 ಓವರ್ ಗಳಲ್ಲಿ 186/5 ರನ್ ಗಳಿಸಿತು.
ಮ್ಯಾಥ್ಯೂ ವೇಡ್ ಹಾಗೂ ಮ್ಯಾಕ್ಸ್ ವೆಲ್ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಮ್ಯಾಥ್ಯೂ ವೇಡ್ 53 ಎಸೆತಗಳಲ್ಲಿ 80 ರನ್ ಗಳಿಸಿ ಔಟಾದರು. ಮ್ಯಾಕ್ಸ್ ವೆಲ್ 36 ಎಸೆತಗಳಲ್ಲಿ 54 ರನ್ ಗಳಿಸಿ ನಟರಾಜನ್ ಗೆ ವಿಕೆಟ್ ಒಪ್ಪಿಸಿದರು. ಸ್ಟೀವನ್ ಸ್ಮಿತ್ 24 ರನ್ ಗಳಿಸಿದರು.
ಭಾರತದ ಪರ ಸುಂದರ್ 2, ನಟರಾಜನ್ ಹಾಗೂ ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.