×
Ad

​ಪ್ರೊ.ಉದ್ಯಾವರ ಮಾಧವಾಚಾರ್ಯರಿಗೆ ಶೃದ್ದಾಂಜಲಿ ಸಭೆ

Update: 2020-12-08 17:48 IST

ಉಡುಪಿ, ಡಿ.8: ಸೋಮವಾರ ಇಲ್ಲಿ ನಿಧನರಾದ ಹಿರಿಯ ವಿದ್ವಾಂಸ, ಸಾಹಿತಿ ಹಾಗೂ ರಂಗಕರ್ಮಿ ಪ್ರೊ. ಉದ್ಯಾವರ ಮಾಧವಾಚಾರ್ಯ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಯಕ್ಷಗಾನ ಕೇಂದ್ರ, ಮಾಹೆ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಕೇಂದ್ರಗಳ ಸಂಯೋಜಕರಾದ ಪ್ರೊ. ವರದೇಶ ಹಿರೇಗಂಗೆ ಇವರು ಮಾಧವಾಚಾರ್ಯರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಾ, ಪ್ರೊ. ಉದ್ಯಾವರ ಮಾಧವಾಚಾರ್ಯರು ಸಾಂಸ್ಕೃತಿಕ ಲೋಕದಲ್ಲಿ ಒಂದು ವಿಶಿಷ್ಟ ವ್ಯಕ್ತಿತ್ವ. ಆಧುನಿಕತೆಯ ಪರಿಚಯವಿದ್ದ ಇವರು ಪರಂಪರೆಯ ಬೇರುಗಳನ್ನು ಗಟ್ಟಿಯಾಗಿ ಹಿಡಿದುಕೊಂಡೇ ತಮ್ಮ ಪ್ರಯೋಗಗಳನ್ನು ಮಾಡಿದವರು. ಸಾಹಿತ್ಯದಲ್ಲಿ ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ಬರವಣಿಗೆ ಮಾಡಿದ ಇವರು, ವಿಶೇಷವಾಗಿ ರಂಗಭೂಮಿ, ನೃತ್ಯರೂಪಕಗಳ ಜಗತ್ತಿನಲ್ಲಿ ಸತತವಾಗಿ ಶೋಧನೆ ಮತ್ತು ಪ್ರಯೋಗಗಳನ್ನು ಮಾಡುತ್ತಲೇ ಬಂದವರು ಎಂದರು.

ಸದಾ ಕಾಲ ಕ್ರಿಯಾಶೀಲ ಮನಸ್ಸನ್ನು ಹೊಂದಿದ್ದ ಇವರು ಕೊನೆಯ ಕ್ಷಣದವರೆಗೂ ತಮ್ಮ ಜೀವನೋತ್ಸಾಹ ಮತ್ತು ಪ್ರಯೋಗಶೀಲತೆಯನ್ನು ಕಳೆದುಕೊಂಡಿರಲಿಲ್ಲ. ನಮ್ಮ ಸಂಸ್ಥೆಗಳ ಚಟುವಟಿಕೆಗಳಲ್ಲಿ ತುಂಬು ಮನಸ್ಸಿನಿಂದ ಭಾಗವಹಿಸುತ್ತಾ ತಮ್ಮ ವಿದ್ವತ್‌ಪೂರ್ಣ ಕೊಡುಗೆಯನ್ನು ನೀಡಿದ್ದಾರೆ. ಇವರ ಒಟ್ಟು ಸಾಹಿತ್ಯ ಮತ್ತು ರಂಗಪ್ರಯೋಗಗಳ ಅಧ್ಯಯನ ಯಾವತ್ತೂ ನಡೆಯಬೇಕಾದ ಕೆಲಸ ಎಂದರು.

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರೊ.ಮಾಧವಾಚಾರ್ಯರ ಸಹೋದ್ಯೋಗಿ ಯಾಗಿದ್ದ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಮಾತನಾಡಿ, ಅವರು ಸಹೃದಯೀ ಶಿಕ್ಷಕರಾಗಿ, ರಂಗಕರ್ಮಿಯಾಗಿ ಹಾಗೂ ಕವಿಯಾಗಿ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಿದ್ದರು. ಅಲ್ಲದೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು, ಉತ್ತಮ ಮಾನವೀಯ ಗುಣಗಳನ್ನು ಹೊಂದಿದ್ದರು. ಅವರ ನಿಧನದಿಂದ ದೊಡ್ಡ ಆಘಾತವಾಗಿದೆ ಎಂದರು.

ಯಕ್ಷಗಾನ ಕೇಂದ್ರದ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ, ಡಾ. ಎನ್.ಟಿ ಭಟ್, ಡಾ. ಪಾದೇಕಲ್ಲು ವಿಷ್ಣು ಭಟ್ ಮೊದಲಾದವರು ಸಂತಾಪ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News