×
Ad

ಕೇಜ್ರಿವಾಲ್ ರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂಬ ಆಪ್ ಆರೋಪಕ್ಕೆ ಟ್ವಿಟರಿಗರ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

Update: 2020-12-08 18:48 IST

ಹೊಸದಿಲ್ಲಿ: ಇಂದಿನ ಭಾರತ್ ಬಂದ್ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ತಮ್ಮ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ(ಆಪ್)ಮಂಗಳವಾರ ಆರೋಪಿಸಿತ್ತು. ಕೇಜ್ರಿವಾಲ್ ಪಕ್ಷ ಗೃಹಬಂಧನ ವಿಚಾರ ಎತ್ತಿದ ತಕ್ಷಣವೇ ಟ್ವಿಟಿರಿಗರು, ಆಪ್ ನಾಯಕರ ವಿರುದ್ಧ ಕೋಪ ವ್ಯಕ್ತಪಡಿಸುವ ಜೊತೆಗೆ ರೈತರ ಪ್ರತಿಭಟನೆಯ ರಾಜಕೀಯ ಲಾಭ ಪಡೆಯುವ ತಂತ್ರ ಇದಾಗಿದೆ ಎಂದು ಆರೋಪಿಸಿದ್ದಾರೆ. ಕೇಜ್ರಿವಾಲ್ ಗೃಹ ಬಂಧನವು ಬಿಜೆಪಿಯ ಆಂತರಿಕ ವಿಚಾರ. ಇದಕ್ಕೂ ರೈತರ ಪ್ರತಿಭಟನೆಗೆ ಸಂಬಂಧವಿಲ್ಲ ಎಂದು ರಾಜು ಪರುಲೇಕಾ ಎಂಬವರು ಟ್ವೀಟ್ ಮಾಡಿದ್ದಾರೆ.

ಆಪ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ತನ್ನ ನಾಯಕ ಮನೀಷ್ ಸಿಸೋಡಿಯಾರ ಹೇಳಿಕೆಯನ್ನು ಹಂಚಿಕೊಂಡಿದೆ. ಸಿಎಂ ಕೇಜ್ರಿವಾಲ್ ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರನ್ನು ಭೇಟಿಯಾಗಿ ವಾಪಸಾದ ಬಳಿಕ ಗೃಹ ಬಂಧನಲ್ಲಿದ್ದಾರೆ. ಜನರಿಗೆ ಆಗಮನ ಹಾಗೂ ನಿರ್ಗಮನಕ್ಕೆ ಅವಕಾಶ ಇಲ್ಲವಾಗಿದೆ. ಭಾರತ್ ಬಂದ್ ಪರವಾಗಿ ಸಿಎಂ ಬೀದಿಗೆ ಇಳಿದು ರೈತರ ಪರ ಮಾತನಾಡುತ್ತಾರೆಂಬ ಭಯ ಬಿಜೆಪಿಯನ್ನು ಕಾಡುತ್ತಿದೆ ಎಂದು ಸಿಸೋಡಿಯಾ ಟ್ವೀಟಿಸಿದ್ದಾರೆ.

ಕೇಜ್ರಿವಾಲ್‌ರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂಬ ಆಪ್ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.

ಆಪ್ ಆರೋಪ ರಾಜಕೀಯ ಅವಕಾಶವಾದಿತನ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ರೈತರ ಅಭೂತಪೂರ್ವ ಚಳುವಳಿಯನ್ನು ವೈಯಕ್ತಿಕ ರಾಜಕೀಯ ಕಾಳಗವಾಗಿ ಪರಿವರ್ತಿಸಬೇಡಿ ಎಂದು ಸಲಹೆ ನೀಡಿದ್ದಾರೆ.

ಟ್ವಿಟರಿಗರ ಪ್ರತಿಕ್ರಿಯೆ ಇಲ್ಲಿದೆ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News