×
Ad

ಶ್ರೀವಿಶ್ವಕರ್ಮ ಸಮಾಜ ಸೇವಾ ಸಂಘದ ಮಹಾಸಭೆ

Update: 2020-12-08 19:32 IST

ಕಾಪು, ಡಿ.8: ಪಡುಕುತ್ಯಾರು ಶ್ರೀವಿಶ್ವಕರ್ಮ ಸಮಾಜ ಸೇವಾ ಸಂಘದ ಪ್ರಥಮ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ದುರ್ಗಾ ಮಂದಿರದಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಎಲ್ಲೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಆಚಾರ್ಯ ಮಾತನಾಡಿ ದರು. ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ಪಡು ಕುತ್ಯಾರಿನ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಲಾಯಿತು. ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

ಸಭೆಯಲ್ಲಿ ಪ್ರಕಾಶ್ ಆಚಾರ್ಯ, ಕಾಪು ಜಯರಾಮ ಆಚಾರ್ಯ, ಸದಾಶಿವ ಆಚಾರ್ಯ, ಮಾಧವ ಆಚಾರ್ಯ, ಶ್ರೀಮತಿ ಆಚಾರ್ಯ, ಅಚ್ಯುತ ಆಚಾರ್ಯ, ಪ್ರವೀಣ್ ಆಚಾರ್ಯ, ತ್ನಾಕರ ಆಚಾರ್ಯ ಉಪಸ್ಥಿತರಿದ್ದರು.

ಗಂಗಾಧರ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುರೇಶ ಅಚಾರ್ಯ ವರದಿ ವಾಚಿಸಿದರು. ಲೆಕ್ಕ ಪತ್ರವನ್ನು ಶಶಿರಾಜ ಆಚಾರ್ಯ ಮಂಡಿಸಿದರು, ದಿನೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News