ತಲಪಾಡಿ: ಹಿಜಾಮ, ಅಕ್ಯುಪಂಚರ್ ಚಿಕಿತ್ಸಾ ಶಿಬಿರ
ಮಂಗಳೂರು : ತಲಪಾಡಿ ಸೋಶಿಯಲ್ ಅಚಿವ್ಮೆಂಟ್ ಫೋರಂ ವತಿಯಿಂದ ಹಿಜಾಮ ಮತ್ತು ಅಕ್ಯುಪಂಚರ್ ಚಿಕಿತ್ಸಾ ಶಿಬಿರ ತಲಪಾಡಿ ಅಬ್ರಾರ್ ಮಸೀದಿಯ ಮದ್ರಸತುಲ್ ಇಸ್ಲಾಮಿಯಾ ಸಭಾಂಗಣದಲ್ಲಿ ನಡೆಯಿತು.
ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಟಿ.ಎಂ. ಇಬ್ರಾಹಿಂ ಹಿಜಾಮ ಚಿಕಿತ್ಸೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಲಪಾಡಿ ಸೋಶಿಯಲ್ ಅಚಿವ್ಮೆಂಟ್ ಫೋರಂ ಅಧ್ಯಕ್ಷರಾದ ಟಿ.ಎಚ್ ಮೊಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಜಾಮ ಚಿಕಿತ್ಸೆಯು ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬರುತ್ತಿರುವ ಚಿಕಿತ್ಸೆಯಾಗಿದೆ, ಅರೇಬಿಯನ್ ದೇಶದಲ್ಲಿ ಹೆಚ್ಚಾಗಿ ಮಾಡುವ ಚಿಕಿತ್ಸೆಯು ಇತ್ತೀಚೆಗೆ ನಮ್ಮ ದೇಶದಲ್ಲಿಯೂ ಮಾಡುತ್ತಿದ್ದಾರೆ. ಈ ಚಿಕಿತ್ಸೆಯು ರೋಗ ನಿರೋಧಕ ಶಕ್ತಿಯಿಂದ ಕೂಡಿದ ಚಿಕಿತ್ಸೆಯಾಗಿದೆ, ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳು, ಸೆಲೆಬ್ರಿಟಿಗಳು ಹೆಚ್ಚಾಗಿ ಮಾಡುತ್ತಿದ್ದಾರೆ ಎಂದರು.
ತಲಪಾಡಿ ಅಬ್ರಾರ್ ಮಸೀದಿಯ ಅಧ್ಯಕ್ಷ ಜಿ.ಅಬ್ಬಾಸ್, ಉದ್ಯಮಿ ಇಬ್ರಾಹಿಂ ಹುಸೈನ್, ತಲಪಾಡಿ ಅಬ್ರಾರ್ ಮಸೀದಿಯ ಸದಸ್ಯರಾದ ಇಸ್ಮಾಯಿಲ್ ಟಿ, ಮಸೀದಿಯ ಇಮಾಮ್ ಅಮೀನ್, ತಲಪಾಡಿ ಸೋಶಿಯಲ್ ಅಚಿವ್ಮೆಂಟ್ ಫೋರಂ ಪ್ರಧಾನ ಕಾರ್ಯದರ್ಶಿ ಶಬೀರ್ ಅಬ್ಬಾಸ್ ತಲಪಾಡಿ, ಕೋಶಾಧಿಕಾರಿ ಹುಸೈನ್ ತಲಪಾಡಿ, ಸದಸ್ಯರಾದ ಅಬೂಬಕರ್, ಶಫೀಕ್ ಅಬ್ಬಾಸ್, ನವಾಝ್.ಕೆ.ಜಿ, ಶಂಶುದ್ದೀನ್, ಬಿ.ಎಸ್. ಇಸ್ಮಾಯಿಲ್, ಜಾಫರ್ ಮೊದಲಾದವರು ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿ ಲತೀಫ್ ಎಸ್.ಎ ಕಾರ್ಯಕ್ರಮ ನಿರೂಪಿಸಿದರು.