ಡಿ.11: ಪೆಟ್ರೋಲಿಯಂ ಕಾರ್ಯದರ್ಶಿ ಮಂಗಳೂರು ಭೇಟಿ
Update: 2020-12-08 22:21 IST
ಮಂಗಳೂರು, ಡಿ.8: ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್‌ನ ಕಾರ್ಯದರ್ಶಿ ತರುಣ್ ಕಪೂರ್ ಡಿ.11ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ.
ಅಂದು ಮಂಗಳೂರಿನ ಪೆಟ್ರೋಲ್ ಉತ್ಪಾದನಾ ಕೇಂದ್ರ ಎಂಆರ್‌ಪಿಎಲ್‌ಗೆ, ಎಫ್‌ಜಿಟಿಯು ಸೈಟ್‌ಗೆ ಭೇಟಿ ನೀಡಿ ಪೂರ್ವಭಾವಿ ಚಟುವಟಿಕೆಗಳ ಬಗ್ಗೆ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಡಿ.12ರಂದು ಒಎಂಪಿಎಲ್ ಹಾಗೂ ಐಎಸ್‌ಪಿಆರ್‌ಎಲ್ ಸೈಟ್‌ಗೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.