×
Ad

ಪಡುಬಿದ್ರಿಯಲ್ಲಿ ಅಂಬೇಡ್ಕರ್ ಪರಿನಿರ್ಮಾಣ ದಿನ

Update: 2020-12-08 22:50 IST

ಪಡುಬಿದ್ರಿ : ಪಡುಬಿದ್ರಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪಡುಬಿದ್ರಿ ಪೇಟೆಯಲ್ಲಿ ಭಾನುವಾರ ಸಂಜೆ ಡಾ ಬಿ. ಆರ್. ಅಂಬೇಡ್ಕರ್‍ರವರ ಮಹಾ ಪರಿನಿರ್ವಾಣ ದಿನವನ್ನು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಛಾಯಾ ಚಿತ್ರಕ್ಕೆ ಹೂ ಹಾಕಿ ಪುಷ್ಪ ನಮನ ಸಲ್ಲಿಸಿ ಆಚರಿಸಲಾಯಿತು.

ಕಾಪು ತಾಲೂಕು ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷ ಲೋಕೇಶ್ ಕಂಚಿನಡ್ಕ ಮಾತನಾಡಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಶ್ರೇಷ್ಠ ಮಾನವ ತಾವಾದಿ ಡಾ. ಬಿ.ಆರ್. ಅಂಬೇಡ್ಕರ್‍ರವರು ಶೋಷಣೆ, ಅವಮಾನಗಳನ್ನು ಸಹಿಸಿಕೊಂಡು ಹುಟ್ಟು ಹೋರಾಟಗಾರರಾಗಿದ್ದರು. ಅವರು ರಚಿಸಿದ ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊರ್ವ ಭಾರತೀಯನ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಡಾ. ಅಂಬೇಡ್ಕರ್ ಅವರ ಛಾಯಾ ಚಿತ್ರಕ್ಕೆ ಪಡುಬಿದ್ರಿಯ ಉದ್ಯಮಿ ಸಂತೋಷ್ ಶೆಟ್ಟಿ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.  ಪಡುಬಿದ್ರಿ ರೋಟರಿ ಅಧ್ಯಕ್ಷ ಕೇಶವ ಸಾಲ್ಯಾನ್ ಯುವ ಸೇನೆಯ ಕಾರ್ಯದರ್ಶಿ ವಸಂತ ಸಾಲ್ಯಾನ್ ಪಾದೆಬೆಟ್ಟು, ಕೋಶಾಧಿಕಾರಿ ಸುಜೀತ್, ಮಹಿಳಾ ಘಟಕಾಧ್ಯಕ್ಷೆ ರಾಜೀವಿ ಪಡುಬಿದ್ರಿ ಗ್ರಾಮ ಶಾಖೆಯ ಅಧ್ಯಕ್ಷೆ ಪ್ರಮೀಳಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News