ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಡೇವಿಡ್ ವಾರ್ನರ್ ಅಲಭ್ಯ

Update: 2020-12-09 07:04 GMT

ಸಿಡ್ನಿ: ಸೀಮಿತ ಓವರ್ ಸರಣಿಯಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದ ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಭಾರತ ವಿರುದ್ಧ ಅಡಿಲೇಡ್ ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.

ಭಾರತ-ಆಸ್ಟ್ರೇಲಿಯ ನಡುವಿನ ಸರಣಿಯು ಡಿಸೆಂಬರ್ 17 ರಂದು ಆರಂಭವಾಗಲಿದೆ. ಈ ಪಂದ್ಯ ಹಗಲು-ರಾತ್ರಿ ನಡೆಯಲಿದೆ.

"ಟೆಸ್ಟ್ ಪಂದ್ಯದಲ್ಲಿ ನೂರು ಪ್ರತಿಶತ ಸಜ್ಜಾಗಲು ನಾನು ಬಯಸಿದ್ದೇನೆ.ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಡುವ ವಿಶ್ವಾಸದಲ್ಲಿದ್ದೇನೆ''ಎಂದು ವಾರ್ನರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News