×
Ad

ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ನೂತನ ಚಿನ್ನಾಭರಣ ಸಂಗ್ರಹದ ಅನಾವರಣ

Update: 2020-12-09 17:20 IST

ಉಡುಪಿ, ಡಿ. 9: ನಗರದ ಗೀತಾಂಜಲಿ ಸಿಲ್ಕ್ಸ್ ಸಮೀಪದ ವಿಎಸ್‌ಟಿ ರಸ್ತೆಯಲ್ಲಿರುವ ಪ್ರತಿಷ್ಠಿತ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶೋರೂಂನಲ್ಲಿ ನೂತನ ಚಿನ್ನಾಭರಣಗಳ ಸಂಗ್ರಹದ ಅನಾವರಣ ಕಾರ್ಯಕ್ರಮ ಇಂದು ನಡೆಯಿತು.

ಡೈಮಂಡ್ ಜ್ಯುವೆಲ್ಲರಿಯನ್ನು ಉಡುಪಿ ತುಳುಕೂಟದ ಮಾಜಿ ಉಪಾಧ್ಯಕ್ಷೆ ವಿದ್ಯಾ ಸರಸ್ವತಿ ಮತ್ತು ಕುಟುಂಬ, ಅನ್‌ಕಟ್ ಡೈಮಂಡ್ ಜ್ಯುವೆಲ್ಲರಿಯನ್ನು ಸುವಿದಾ ಫೈನಾನ್ಸ್‌ನ ಸತೀಶ್ ಹೆಗ್ಡೆ ಮತ್ತು ಕುಟುಂಬ, ಪ್ರಿಸಿಯಸ್ ಜ್ಯುವೆಲ್ಲರಿ ಯನ್ನು ಸುಧಾ ಫರ್ನಿಚರ್‌ನ ಆಡಳಿತ ನಿರ್ದೇಶಕಿ ಉಷಾ ಸುಧಾಕರ ಶೆಟ್ಟಿ, ಟೆಂಪಲ್ ಕಲೆಕ್ಷನ್ ಜ್ಯುವೆಲ್ಲರಿಯನ್ನು ಕುಂದಾಪುರದ ವಕೀಲೆ ಸುಪ್ರಿಯಾ ಆರ್. ಹೆಗ್ಡೆ, ಪ್ಲಾಟಿನಂ ಜ್ಯುವೆಲ್ಲರಿಯನ್ನು ಪವರ್ ಸಂಸ್ಥೆಯ ಅಧ್ಯಕ್ಷೆ ಪುಷ್ಪಾ ಜಿ.ರಾವ್ ಅನಾವರಣಗೊಳಿಸಿದರು.

ಇದೇ ಸಂದರ್ಭದಲ್ಲಿ ಟಿಸ್ಸೊಟ್ ವಾಚನ್ನು ಥೀಮ್ ಬ್ಯುಟಿಕ್‌ನ ರೇಶ್ಮಾ ಸಯ್ಯದ್ ಮತ್ತು ಸಿಕೋ ವಾಚನ್ನು ಡಾ.ಸತೀಶ್ ಕಾಮತ್ ಅನಾವರಣ ಗೊಳಿಸಿದರು. ಶಾಖಾ ವ್ಯವಸ್ಥಾಪಕ ಬಿ.ಎಂ. ಮುಹಮ್ಮದ್ ಅಜ್ಮಲ್ ಸ್ವಾಗತಿಸಿದರು. ಫೋರ್ ಮೆನೇಜರ್ ಸಿದ್ದೀಕ್ ಹಸನ್ ಕಾರ್ಯಕ್ರಮ ನಿರೂಪಿಸಿದರು. ಪಿಆರ್ ಒ ಮಂಜುನಾಥ್ ಅಮೀನ್ ವಂದಿಸಿದರು. ಅಸಿಸ್ಟೆಂಟ್ ಸೇಲ್ಸ್ ಮೆನೇಜರ್ ಮುಹಮ್ಮದ್ ಶಾಮಿಲ್, ಅಬ್ದುಲ್ ಖಾದರ್, ನಝೀರ್ ಅಹ್ಮದ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News