×
Ad

ಬಾಲಕರಿಬ್ಬರ ಅಪರಹಣ ನಡೆದಿಲ್ಲ: ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಸ್ಪಷ್ಟನೆ

Update: 2020-12-09 19:21 IST

ಉಡುಪಿ, ಡಿ.9: ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಡಿ.3ರಂದು ಆಡುತ್ತಿದ್ದ ಬಾಲಕರಿಬ್ಬರು ಅಪಹರಣಕ್ಕೆ ಒಳಗಾಗಿರಬಹುದೆಂದು ಶಂಕಿಸಿ ಮಹಿಳಾ ಠಾಣೆಗೆ ನೀಡಿರುವ ದೂರಿನ ಪ್ರಕರಣವು ಹೊಸ ತಿರುವು ಪಡೆದು ಕೊಂಡಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಉಡುಪಿಯಲ್ಲಿ ಬಾಲಕರಿಬ್ಬರ ಅಪಹರಣ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಡಿ.2ರಂದು ಇಬ್ಬರು ಬಾಲಕರು, ನಿಟ್ಟೂರಿನಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಬಂದಿದ್ದು, ಅವರ ಅಕ್ಕ ಅಲ್ಲೇ ಇರುವುದರಿಂದ ನಾವು ಕೂಡ ಇಲ್ಲೇ ಇರುವುದಾಗಿ ಹೇಳಿಕೊಂಡಿದ್ದರು. ನಮ್ಮ ತಾಯಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಗಳಲ್ಲಿ ವಾಸ ಮಾಡಿಕೊಂಡು ಮದ್ಯಪಾನ ಸೇವಿಸಿ ಹೊಡೆಯುತ್ತಾರೆ. ನಮಗೆ ರಕ್ಷಣೆ ಮತ್ತು ಪುನರ್ವಸತಿ ನೀಡುವಂತೆ ಕೇಳಿಕೊಂಡಿದ್ದರು.

ತಕ್ಷಣ ವಿಷಯವನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಿಗೆ ತಿಳಿಸಲಾ ಯಿತು. ಅಧ್ಯಕ್ಷರ ಆದೇಶದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಮಕ್ಕಳನ್ನು ಪುನರ್ವಸತಿಗಾಗಿ ಕುಂದಾಪುರ ಹಟ್ಟಿಯಂಗಡಿಯಲ್ಲಿರುವ ನಮ್ಮ ಭೂಮಿ ಸಂಸ್ಥೆಗೆ ದಾಖಲಿಸಿದರು.

ಒಂದು ಮಗುವಿನ ತಂದೆ ನಾಗರಾಜ್, ಮಕ್ಕಳ ಸಹಾಯವಾಣಿ ಸಹಾಯ ಪಡೆದು, ಯಾರನ್ನು ಈ ಬಗ್ಗೆ ವಿಚಾರಿಸದೆ ನೇರವಾಗಿ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಆದರೆ ಉಡುಪಿಯಲ್ಲಿ ಯಾವುದೇ ಮಕ್ಕಳ ಅಪರಹಣ ನಡೆದಿಲ್ಲ. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಶಕ್ತರಾಗಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾಗಿ ಮಕ್ಕಳನ್ನು ವಶಕ್ಕೆ ಪಡೆಯಬಹು ದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News