×
Ad

ದ.ಕ.ಜಿಲ್ಲೆ ಗ್ರಾಪಂ ಚುನಾವಣೆ : ಮೂರನೇ ದಿನ 513 ನಾಮಪತ್ರ ಸಲ್ಲಿಕೆ

Update: 2020-12-09 21:49 IST

ಮಂಗಳೂರು, ಡಿ.9: ದ.ಕ. ಜಿಲ್ಲೆಯಲ್ಲಿ ನಡೆಯಲಿರುವ ಮೊದಲ ಸುತ್ತಿನ ಗ್ರಾಪಂ ಚುನಾವಣೆಗೆ ಮೂರನೇ ದಿನವಾದ ಬುಧವಾರ 513 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಂಗಳೂರು ತಾಲೂಕಿನಲ್ಲಿ 141, ಮೂಡುಬಿದಿರೆಯಲ್ಲಿ 52 ಮತ್ತು ಬಂಟ್ವಾಳ ತಾಲೂಕಿನಲ್ಲಿ 320 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮೊದಲ ದಿನವಾದ ಸೋಮವಾರ 30, ಎರಡನೇ ದಿನವಾದ ಮಂಗಳವಾರ 38 ನಾಮಪತ್ರ ಸಲ್ಲಿಕೆಯಾಗಿದ್ದವು. ಒಟ್ಟಾರೆ ಮೂರು ದಿನಗಳಲ್ಲಿ 581 ನಾಮಪತ್ರಗಳು ಸಲ್ಲಿಕೆಯಾದಂತಾಗಿವೆ.

ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದೆ. ಮರುದಿನ (ಶನಿವಾರ) ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 3,222 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 1,681 ಸ್ಥಾನಗಳಿಗೆ ಮತ್ತು ದ್ವಿತೀಯ ಹಂತದಲ್ಲಿ 1,541 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News