ಪದವಿನಂಗಡಿ: ಕಾರುಗಳ ನಡುವೆ ಅಪಘಾತ
Update: 2020-12-10 10:02 IST
ಮಂಗಳೂರು, ಡಿ.10: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು ಬಳಿಕ ಅಂಗಡಿಯ ಆವರಣ ಗೋಡೆಗೆ ಗುದ್ದಿದ ಘಟನೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಪದವಿನಂಗಡಿ ಬಳಿ ಬುಧವಾರ ರಾತ್ರಿ ವೇಳೆ ನಡೆದಿರುವುದು ವರದಿಯಾಗಿದೆ.
ಅಪಘಾತದ ರಭಸಕ್ಕೆ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಘಟನೆಯ ವೇಳೆ ಅಂಗಡಿಯಲ್ಲಿ ಗ್ರಾಹಕರು ಇಲ್ಲದೆ ಇದ್ದುದ್ದರಿಂದ ದೊಡ್ಡದೊಂದು ಅನಾಹುತ ತಪ್ಪಿದೆ.
ಈ ವೇಳೆ ಕಾರನ್ನು ತಡೆದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಘಾತಕ್ಕೀಡಾದ ಕಾರಿನ ಚಾಲಕ ಮದ್ಯಪಾನಿಯಾಗಿದ್ದ ಎಂದು ಆರೋಪಿಸಿರುವ ಸ್ಥಳೀಯರು, ಸ್ಥಳಕ್ಕಾಗಮಿಸಿದ ಪೊಲೀಸರು ಈ ಬಗ್ಗೆ ಯಾವುದೇ ತಪಾಸಣೆ ಮಾಡಿಲ್ಲ ಎಂದು ದೂರಿದ್ದಾರೆ.
ಬಳಿಕ ಅಪಘಾತಕ್ಕೊಳಗಾದ ಎರಡು ಕಾರಿನವರನ್ನು ಪೊಲೀಸರು ಠಾಣೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.