×
Ad

ಭಟ್ಕಳ: ಡಿ.13ರಂದು ತಂಝೀಮ್ ನಿಂದ ಉಚಿತ ಮುಂಜಿ ಕಾರ್ಯಕ್ರಮ

Update: 2020-12-10 10:16 IST

ಭಟ್ಕಳ, ಡಿ.10: ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯಿಂದ ಡಿ.13 ರಂದು ಉಚಿತ ಮುಂಜಿ(ಸುನ್ನತಿ) ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಂಝೀಮ್  ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನುರಿತ ವೈದ್ಯರ ತಂಡವು 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮುಂಜಿ ಮಾಡಲಿದ್ದು,  200 ರೂ. ನೋಂದಣಿ ಶುಲ್ಕ ಪಾವತಿಸಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ.ಮುಹಮ್ಮದ್ ಹನೀಫ್ ಶಬಾಬ್, ಮುಂಜಿ ಶಿಬಿರದ ಸಂಚಾಲಕ ಡಿ.ಎಫ್ ಸಿದ್ದೀಖ್, ಮೌಲಾನ ಯಾಸಿರ್ ನದ್ವಿ, ಹಂದಾ ಮೀರಾ ಸಾಹೇಬ್, ಜಾನ್ ಅಬ್ದುರ್ರಹ್ಮಾನ್ ಮೊಹ್ತೆಶಾಮ್, ಜೈಲಾನಿ ಶಾಬಂದ್ರಿ,  ಮಟ್ಟಾ ಸಾದಿಕ್  ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News