×
Ad

ದೇರಳಕಟ್ಟೆ : ಸಿಟಿ ಪಾಲಿ ಕ್ಲಿನಿಕ್ ಉದ್ಘಾಟನೆ

Update: 2020-12-10 19:57 IST

ಉಳ್ಳಾಲ : ಆಧುನಿಕ ಯುಗದಲ್ಲಿ ವೈದ್ಯಕೀಯ ಸೇವೆ ಎಲ್ಲೆಡೆ ವಿಸ್ತರಣೆ ಆಗಬೇಕಾದ ಅವಶ್ಯಕತೆ ಇದೆ. ತುರ್ತು ಚಿಕಿತ್ಸೆಗೆ ಪಾಲಿ ಕ್ಲಿನಿಕ್ ಉಪಯೋಗಕ್ಕೆ ಬರುತ್ತದೆ ಎಂದು  ಡಾ. ಮುಹಮ್ಮದ್ ಸಲೀಂ ಹೇಳಿದರು.

ಅವರು ದೇರಳಕಟ್ಟೆಯಲ್ಲಿ ನೂತನವಾಗಿ ಆರಂಭಗೊಂಡ ಸಿಟಿ ಪಾಲಿ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮ ದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬೂಬಕರ್ ಹಾಜಿ, ಖತೀಬ್ ರಿಯಾಝ್ ರಹ್ಮಾನ್, ಡಾ. ಪಂಡಿತ್ ಮುಹಮ್ಮದ್, ಯಹ್ಯಾ ತಂಙಳ್, ಹಾಜಿ ಅಹ್ಮದ್ ಬಾವಾ, ಮುಹಮ್ಮದ್ ಟಿ.ಎ. ಬೆಳ್ಳಾರೆ, ಪ್ರಸಾದ್ ರೈ ಕಲ್ಲಿಮಾರ್, ಉದ್ಯಮಿ ಅಬ್ದುಲ್ ಹಮೀದ್ ಮಂಗಳೂರು, ಅಬ್ದುಲ್ ಕರೀಂ, ಹಾಜಿ ಶಾಮ್ ಹೂನ್, ರಹೀಂ ಉಸ್ತಾದ್ ಮೊದಲಾದವರು ಉಪಸ್ಥಿತರಿದ್ದರು.

ನಿಸಾರ್ ಕಲ್ಲಾಪು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ.ಝೈನುದ್ದೀನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News