×
Ad

ಕೊಂಕಣಿ ಸಾಹಿತ್ಯ ಅಕಾಡಮಿಯಿಂದ ಸಿಎಂ ಭೇಟಿ

Update: 2020-12-10 22:53 IST

ಮಂಗಳೂರು, ಡಿ.10: ಕೊಂಕಣಿ ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ಸಹಿತ ವಿವಿಧ ಬೇಡಿಕೆಗ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.

6ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಕೊಂಕಣಿ ಭಾಷೆಯಲ್ಲಿ ಕಲಿಕೆ, ಡಿ.ಎಡ್, ಬಿ.ಎಡ್, ಎಂ.ಎಡ್. ತರಗತಿಗಳಲ್ಲಿ ಕೊಂಕಣಿ ಭಾಷೆ ಅಳವಡಿಕೆ, ವಿವಿಧ ಹಂತಗಳಲ್ಲಿ ಕೊಂಕಣಿ ಭಾಷಾ ಶಿಕ್ಷಕರ ನೇಮಕಾತಿಯೇ ಮೊದಲಾದ ಬೇಡಿಕೆಗಳನ್ನು ಮುಖ್ಯಮಂತ್ರಿಯ ಗಮನ ಸೆಳೆಯಲಾಯಿತು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ.ಕೆ. ಜಗದೀಶ್ ಪೈ ನೇತೃತ್ವದ ನಿಯೋಗದಲ್ಲಿ ಅಕಾಡಮಿಯ ಸದಸ್ಯರಾದ ಸಾಣೂರು ನರಸಿಂಹ ಕಾಮತ್, ಅರುಣ್ ಶೇಟ್, ನವೀನ್ ನಾಯಕ್ ಮತ್ತು ಗುರುಮೂರ್ತಿ ಶೇಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News