×
Ad

ಕಾಸರಗೋಡು ಜಿಲ್ಲೆಯಲ್ಲಿ ಮಧ್ಯಾಹ್ನ 1:15ರ ವೇಳೆ ಶೇ.50 ಮತದಾನ

Update: 2020-12-14 13:22 IST

ಕಾಸರಗೋಡು, ಡಿ.14: ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯಾಡಳಿತ  ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ಮುಂದುವರಿದಿದೆ.

ಮಧ್ಯಾಹ್ನ 1:15ರ ವೇಳೆಗೆ ಶೇ.50 ಮತದಾನವಾಗಿದೆ. ಈ ಅವಧಿಯಲ್ಲಿ ಒಟ್ಟು 5,26,467ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ. ಈ ಪೈಕಿ 2,52,592 ಪುರುಷರು, 2,73,875 ಮಹಿಳಾ ಮತದಾರರು ಸೇರಿದ್ದಾರೆ.

ಜಿಲ್ಲಾ ಪಂಚಾಯತ್ ನ  17  ಡಿವಿಜನ್, 38 ಗ್ರಾಮ ಪಂಚಾಯತ್ ಗಳು, 6 ಬ್ಲಾಕ್ ಪಂಚಾಯತ್ ಮತ್ತು ಮೂರು ನಗರಸಭೆಗಳಿಗೆ ಚುನಾವಣೆ  ನಡೆಯುತ್ತಿದೆ. 1,409 ಮತಗಟ್ಟೆಗಳಲ್ಲಿ  ಮತದಾನ ನಡೆಯುತ್ತಿದೆ. 2,648 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News