ಉಡುಪಿ ವಿಎಚ್‌ಪಿ ಉಪಾಧ್ಯಕ್ಷರ ವಜಾ
Update: 2020-12-14 13:29 IST
ಉಡುಪಿ, ಡಿ.14: ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲೆಯ ಉಪಾಧ್ಯಕ್ಷ ಸಂತೋಷ್ ಕುಮಾರ್ ಬೈರಂಪಳಿ ಅವರನ್ನು ಪರಿಷತ್‌ನಿಂದ ವಜಾಗೊಳಿಸಲಾಗಿದೆ.
ಸಂತೋಷ್ ಅವರನ್ನು ವಿಶ್ವ ಹಿಂದೂ ಪರಿಷತ್ತಿನ ಜವಾಬ್ದಾರಿಯಿಂದ ಮುಕ್ತ ಮಾಡಲಾಗಿದೆ. ಅವರಿಗೆ ಇನ್ನು ಮುಂದೆ ವಿಶ್ವ ಹಿಂದೂ ಪರಿಷತ್ತಿನಲ್ಲಿ ಯಾವುದೇ ಜವಾಬ್ದಾರಿ ಇರುವುದಿಲ್ಲ ಎಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.