×
Ad

ಕೆಪಿಸಿಸಿ ಎನ್‌ಆರ್‌ಐ ವಿಭಾಗದ ಸಾಮಾಜಿಕ ಜಾಲತಾಣದ ಮಾಧ್ಯಮ ವಕ್ತಾರರಾಗಿ ಡಾ.ಅಬ್ದುಲ್ ಹಾರಿಸ್ ಆಯ್ಕೆ

Update: 2020-12-14 16:40 IST

ಮಂಗಳೂರು, ಡಿ.14: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅನಿವಾಸಿ ಭಾರತೀಯ(ಎನ್‌ಆರ್‌ಐ)ರ ವಿಭಾಗದ ಸಾಮಾಜಿಕ ಜಾಲತಾಣದ ಮಾಧ್ಯಮ ವಕ್ತಾರರಾಗಿ ಡಾ.ಎಂ.ಕೆ.ಅಬ್ದುಲ್ ಹಾರಿಸ್ ಆಯ್ಕೆಯಾಗಿದ್ದಾರೆ.

ಡಾ.ಹಾರಿಸ್‌ರನ್ನು ನೇಮಕಗೊಳಿಸಿ ಕೆಪಿಸಿಸಿ ಅನಿವಾಸಿ ಭಾರತೀಯರ ವಿಭಾಗದ ಅಧ್ಯಕ್ಷೆ ಡಾ.ಆರತಿ ಕೃಷ್ಣ ಆದೇಶಿಸಿದ್ದಾರೆ.

ಮೂಲತಃ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕುಂಡಡ್ಕ ನಿವಾಸಿಯಾಗಿರುವ ಡಾ.ಎಂ.ಕೆ.ಅಬ್ದುಲ್ ಹಾರಿಸ್ ದೇರಾ ದುಬೈಯಲ್ಲಿ ಉದ್ಯೋಗಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News