ಕಾಸರಗೋಡು: ಬೂತ್ ಏಜೆಂಟ್ ಕುಸಿದು ಬಿದ್ದು ಮೃತ್ಯು
Update: 2020-12-14 17:02 IST
ಕಾಸರಗೋಡು: ಬೂತ್ ಏಜೆಂಟ್ ಓರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡು ನಗರಸಭಾ ವ್ಯಾಪ್ತಿಯ ತಳಂಗರೆ 22ನೇ ವಾರ್ಡ್ ನ ಎಲ್ ಡಿ ಎಫ್ ಬೂತ್ ಏಜಂಟ್, ಸಿಪಿಎಂ ಕಾರ್ಯಕರ್ತ ಅಪ್ಜಲ್ ಖಾನ್ (49) ಮೃತಪಟ್ಟವರು.
ತಳಂಗರೆ ಪಳ್ಳಿಕ್ಕಾಲ್ ಎಂ.ಎಲ್.ಪಿ ಶಾಲೆಯ ಮತಗಟ್ಟೆ ಬಳಿ ಕುಸಿದು ಬಿದ್ದಿದ್ದು, ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಿಳಿದು ಬಂದಿದೆ