×
Ad

ವಿಶ್ವ ಬಂಟರ ಫೌಂಡೇಶನ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಡಾ. ಎ.ಜೆ. ಶೆಟ್ಟಿ

Update: 2020-12-14 17:38 IST

ಮಂಗಳೂರು: ಎ. ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎ. ಜೆ. ಶೆಟ್ಟಿಯವರು ವಿಶ್ವ ಬಂಟರ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಇತೀಚೆಗೆ ನಡೆದ ಟ್ರಸ್ಟಿಗಳ ಸಭೆಯಲ್ಲಿ ಸರ್ವಾನುಮತದಿಂದ ಡಾ. ಎ. ಜೆ. ಶೆಟ್ಟಿ ಯವರನ್ನು ಅಧ್ಯಕ್ಷರಾಗಿ ಚುನಾಯಿಸಲಾಯಿತು.

ಶ್ರೀ ಕೆ. ಸಚ್ಚಿದಾನಂದ ಹೆಗ್ಡೆ ಸ್ಟಾನ್ಸ್ ಗ್ರೂಪ್ ಕಂಪನಿಯ ನಿವೃತ ನಿರ್ದೇಶಕರನ್ನು ಉಪಾಧ್ಯಕ್ಷರಾಗಿ ಚುನಾಯಿಸಲಾಯಿತು.

ಇತರ ಪದಾಧಿಕಾರಿಗಳು ಡಾ. ಎಂ. ಶಾಂತಾರಾಮ್ ಶೆಟ್ಟಿ ಮಾಜಿ ಅಧ್ಯಕ್ಷರು, ಕುಶಾಲ್ ಎಸ್ ಹೆಗ್ಡೆ ಪುಣೆ ಉಪಾಧ್ಯಕ್ಷರು, ರೀತ ಶೆಟ್ಟಿ ಹೊಸದಿಲ್ಲಿ ಉಪಾಧ್ಯಕ್ಷರು, ಸಿಎ ಸುಧೀರ್ ಕುಮಾರ್ ಶೆಟ್ಟಿ ವೈ, ಕಾರ್ಯದರ್ಶಿ, ಸಿಎ ರಘುಚಂದ್ರ ಶೆಟ್ಟಿ ಖಜಾಂಚಿ ಹಾಗು ಡಾ. ಬಿ. ಸಂಜೀವ ರೈ ಯೋಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರುವ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ, ವಿದ್ಯಾರ್ಥಿವೇತನ, ವೈಧ್ಯಕೀಯ ನೆರವು, ಕ್ರೀಡೆ ಮತ್ತು ಸಾಂಸ್ಕತಿಕ ಚಟುವಟಿಕೆಗಳಿಗೆ ಬೆಂಬಲ ನೀಡುವ ಮೂಲಕ ಈ ಟ್ರಸ್ಟ್ ಸಹಾಯ ಮಾಡುತ್ತಿದೆ. ಕಲೆ ಮತ್ತು ಸಂಸ್ಕೃತಿ, ಶಿಕ್ಷಣ, ಆರೋಗ್ಯ ಮತ್ತು ಕ್ರೀಡಾ ಚಟುವಟಿಕೆಗಳಂತಹ ವಿವಿಧ ಕ್ಷೇತ್ರಗಳ ಸಾಧಕರನ್ನು ಈ ಟ್ರಸ್ಟ್ ಗುರುತಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News