×
Ad

ಅಮೆರಿಕಾದಲ್ಲಿ ಕೋವಿಡ್ ಲಸಿಕೆ ನೀಡಿಕೆ ಪ್ರಾರಂಭ

Update: 2020-12-14 21:22 IST

ನ್ಯೂಯಾರ್ಕ್,ಡಿ.14: ಅಮೆರಿಕಾದ ನಾಗರಿಕರಿಗೆ ಫೈಝರ್-ಬಯೋಎನ್’ಟೆಕ್ ಲಸಿಕೆ ನೀಡುವಿಕೆಯು ಸೋಮವಾರದಂದು ಪ್ರಾರಂಭವಾಯಿತು. ಈ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೆ ನೀಡಿದ್ದಾರೆ.

"ಮೊದಲ ವ್ಯಾಕ್ಸಿನ್ ಅನ್ನು ನೀಡಲಾಯಿತು. ಅಮೆರಿಕಾಗೆ ಶುಭಾಶಯಗಳು, ವಿಶ್ವಕ್ಕೆ ಶುಭಾಶಯಗಳು" ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಅಮೆರಿಕಾದ ಆರೋಗ್ಯ ಕಾರ್ಯಕರ್ತೆಯೋರ್ವರು ಮೊದಲ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ಸೋಮವಾರದಂದು ಅಮೆರಿಕದ ಎಲ್ಲಾ ರಾಜ್ಯಗಳ 145 ಸ್ಥಳಗಳಲ್ಲಿ ಲಸಿಕೆಯನ್ನು ವಿತರಿಸುವ ನಿರೀಕ್ಷೆಯಿದೆ. ಮಂಗಳವಾರದಂದು ಇನ್ನೂ 425 ಸ್ಥಳಗಳಲ್ಲಿ ನೀಡಲಾಗುವುದು. ಅಂತಿಮವಾಗಿ ಬುಧವಾರದಂದು 66 ಸ್ಥಳಗಳಲ್ಲಿ ವಿತರಿಸಲಾಗುವುದು. ಇದರೊಂದಿಗೆ ಫೈಝರ್-ಬಯೋಎನ್‌ಟೆಕ್ ಲಸಿಕೆಯ ಆರಂಭಿಕ ಹಂತದ ಪೂರೈಕೆಯು ಸಂಪೂರ್ಣವಾಗಲಿದೆ ಎಂದು ಅಭಿಯಾನದ ಉಸ್ತುವಾರಿಯೋರ್ವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News