ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧ ಮಾರಾಟ; ಪರವಾನಿಗೆ ಅಮಾನತು
Update: 2020-12-14 22:38 IST
ಉಡುಪಿ, ಡಿ.14: ಉಡುಪಿಯ ಕೋರ್ಟ್ ಕಾಂಪ್ಲೆಕ್ಸ್ ಎದುರಿನ ದಿಶಾ ಮೆಡಿಕೇರ್ ಸಂಸ್ಥೆ ನೋಂದಾಯಿತ ವೈದ್ಯರ ಸಲಹಾ ಚೀಟಿ ಇಲ್ಲದೆ ಮತ್ತು ಮಾರಾಟ ರಶೀದಿಗಳನ್ನು ನಿರ್ವಹಿಸದೇ ಇರುವುದರಿಂದ ಸಂಸ್ಥೆಯ ಪರವಾನಿಗೆ ಯನ್ನು ಒಟ್ಟು 15 ದಿನಗಳವರೆಗೆ ಅಮಾನತುಗೊಳಿಸಿ ಉಡುಪಿ ಸಹಾಯಕ ಔಷಧ ನಿಯಂತ್ರಕರು ಮತ್ತು ಪರವಾನಿಗೆ ಪ್ರಾಧಿಕಾರಿ ಕೆ.ವಿ. ನಾಗರಾಜ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.