ಉಡುಪಿ: ಮಹಿಳೆ ನಾಪತ್ತೆ

Update: 2020-12-14 17:27 GMT

ಉಡುಪಿ, ಡಿ.14: ಆಂದ್ರಪ್ರದೇಶದಿಂದ ಕೆಲಸದ ನಿಮಿತ್ತ ಮಂಗಳೂರಿಗೆ ಬಂದಿದ್ದ ಲೋಕಮ್ಮ (42) ಎಂಬವರು ಉಡುಪಿ ಬಸ್ ನಿಲ್ದಾಣದಿಂದ ನ.24 ರಂದು ಕಾಣೆಯಾಗಿದ್ದಾರೆ.

ಚಹರೆ: 152 ಸೆಂ.ಮೀ ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ ಹೊಂದಿದ್ದು, ತೆಲುಗು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News