ಎಸ್ಸೆಸ್ಸೆಫ್ ಹೂಡೆ ಶಾಖೆ ವಾರ್ಷಿಕ ಮಹಾಸಭೆ

Update: 2020-12-14 17:30 GMT

ಉಡುಪಿ, ಡಿ.14: ಎಸ್ಸೆಸ್ಸೆಫ್ ಹೂಡೆ ಶಾಖೆಯ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆಯು ಶಾಖಾಧ್ಯಕ್ಷ ಸಿಹಾನ್ ಅಧ್ಯಕ್ಷತೆಯಲ್ಲಿ ಹೂಡೆಯ ದಾರುಸ್ಸಲಾಂ ಮದ್ರಸ ಹಾಲ್ ನಲ್ಲಿ ಇತ್ತೀಚೆಗೆ ಜರಗಿತು.

ಉಡುಪಿ ಡಿವಿಷನ್ ಅಧ್ಯಕ್ಷ ಸೈಯ್ಯೆದ್ ಯೂಸುಫ್ ತಂಙಲ್ ಹೂಡೆ ದುವಾ ಹಾಗೂ ಉದ್ಘಾಟನೆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಫಾಹಿಝ್ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಸಂಘಟನಾ ಮಾಹಿತಿ ನೀಡಿದರು. ಡಿವಿಷನ್ ಕಾರ್ಯದರ್ಶಿ ಇಬ್ರಾಹಿಂ ರಂಗನಕೆರೆ ನೂತನ ಸಮಿತಿಗೆ ಚಾಲನೆ ನೀಡಿದರು.

2020-21ರ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಆಯಾನ್ ತೋನ್ಸೆ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಸ್.ಸಿಹಾನ್, ಕೋಶಾಧಿಕಾರಿಯಾಗಿ ಉಸ್ತಾದ್ ಅತಾವುಲ್ಲಾ, ಉಪಾಧ್ಯಕ್ಷರಾಗಿ ಮುಹಮ್ಮದ್ ಇಸ್ಮಾಯಿಲ್, ನೌಮಾನ್, ಕಾರ್ಯದರ್ಶಿಗಳಾಗಿ ಕೂದುರ್ ಮುಹಮ್ಮದ್ ಫಾಯೀಝ್, ಮುಹಮ್ಮದ್ ಅಫ್ನಾನ್, ಸುಫ್ಯಾನ್, ಮುಹಮ್ಮದ್ ಝಿಶಾನ್, ಸೈಫ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಖತೀಬ್ ಆತೀಫ್ ಹುಸೈನ್, ಕಾರ್ಯಕಾರಿ ಸದಸ್ಯರುಗಳಾಗಿ ಸೈಯ್ಯದ್ ಯೂಸುಫ್ ನವಾಝ್, ಸೈಯ್ಯದ್ ಅಸ್ರಾರ್ ಅಹ್ಮದ್, ಮುಹಮ್ಮದ್ ನಿಹಾಲ್, ಮುಹಮ್ಮದ್ ಝಿಶಾನ್ ಉಸ್ತಾದ್, ಕುದುರ್ ತಬಾರಕ್ ಹುಸೈನ್, ಜಿ.ರಾಝಿಕ್, ಮುಹಮ್ಮದ್ ತೈಯ್ಯಬ್, ಉಸ್ತಾದ್ ಮುಹಮ್ಮದ್ ಸಾಹಿಲ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News