ಉಡುಪಿ: ಅಗಲಿದ ಗಣ್ಯರುಗಳಿಗೆ ಶ್ರದ್ಧಾಂಜಲಿ
Update: 2020-12-14 23:01 IST
ಉಡುಪಿ, ಡಿ.14: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಇತ್ತೀಚೆಗೆ ಅಗಲಿದ ಗಣ್ಯರುಗಳಿಗೆ ಶೃದ್ಧಾಂಜಲಿ ಸಮರ್ಪಿಸುವ ಕಾರ್ಯಕ್ರಮವನ್ನು ಸೋಮವಾರ ನಗರದ ಮಾರುತಿ ವೀಥಿಕಾದಲ್ಲಿರುವ ಸಮಿತಿಯ ಕಛೇರಿಯ ವಠಾರದಲ್ಲಿ ಜರಗಿತು.
ಅಗಲಿದ ಹಿರಿಯ ಚೇತನಗಳಾದ ವಿದ್ವಾಂಸ ಬನ್ನಂಜೆ ಗೋವಿಂದಾ ಚಾರ್ಯ, ಹಿರಿಯ ಸಾಹಿತಿ ಉದ್ಯಾವರ ಮಾಧವ ಆಚಾರ್ಯ, ಮಕ್ಕಳ ಹಕ್ಕುಗಳ ಹೋರಾಟಗಾರ ಬಿ.ದಾಮೋದರ ಆಚಾರ್ಯ, ಬಳಕೆದಾರರ ವೇದಿಕೆ ಮಾಜಿ ಸಂಚಾಲಕ ಕೆ.ದಾಮೋದರ ಐತಾಳ್ ಅವರ ಭಾವಚಿತ್ರಕ್ಕೆ ಪುಷ್ಪ ಸಮನಮನ ಸಲ್ಲಿಸಿ ಭಾಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು.
ಕೋಟಕ್ ಮಹೇಂದ್ರ ಬ್ಯಾಂಕಿನ ವ್ಯವಸ್ಥಾಪಕ ವೆಂಕಟೇಶ್ ನುಡಿನಮನ ಸಲ್ಲಿಸಿದರು. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯ ರಾದ ಕೆ.ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು, ವಿಶ್ವನಾಥ್ ಕೊಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.