×
Ad

ಸಂಸತ್ ಭವನ ನಿರ್ಮಾಣಕ್ಕೆ ಟಾಟಾ ಆಯ್ಕೆಯಾಗಿದ್ದು ಹೇಗೆ?: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

Update: 2020-12-15 13:51 IST

ಹೊಸದಿಲ್ಲಿ,ಡಿ.15: ನೂತನ ಸಂಸತ್ ಭವನದ ನಿರ್ಮಾಣದ ಕುರಿತಾದಂತೆ ಹಲವು ಅಪಸ್ವರಗಳು ಕೇಳಿ ಬರುತ್ತಿರುವ ನಡುವೆಯೇ ಇದೀಗ ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವಿಟ್ಟರ್ ಮೂಲಕ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ.

ಸಂಸತ್ ಭವನ ನಿರ್ಮಾಣದ ಕುರಿತು ಟ್ವೀಟ್ ಮಾಡಿದ ಸುಬ್ರಮಣಿಯನ್ ಸ್ವಾಮಿ, "ನೂತನ ಸಂಸತ್ ಭವನದ ನಿರ್ಮಾಣಕ್ಕೆ ಟಾಟಾ ಕಂಪೆನಿ ಆಯ್ಕೆಯಾಗಿದ್ದು ಹೇಗೆ ಎನ್ನುವುದರ ಕುರಿತು ಯಾರಿಗಾದರೂ ತಿಳಿದಿದೆಯೇ? ಇದು ಬಿಡ್ ಮೂಲಕ ನಡೆದಿರುವ ಪ್ರಕ್ರಿಯೆಯೇ? ಅಥವಾ 2ಜಿ ಸ್ಪೆಕ್ಟ್ರಮ್ ಹಗರಣದ ಶೈಲಿಯಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆಯೇ?" ಎಂದು ಅವರು ಪ್ರಶ್ನಿಸಿದ್ದಾರೆ.

ಹೊಸ ಸಂಸತ್ ಭವನ ನಿರ್ಮಾಣದ ಗುತ್ತಿಗೆಯನ್ನು ಟಾಟಾ ಸಮೂಹ ಸಂಸ್ಥೆಯು 861.90 ಕೋಟಿ. ರೂ.ಗೆ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News