ಮಂಗಳೂರು: ಎಪಿಐಯಿಂದ ‘ವೈದ್ಯರ ದಿನ’- 2020
ಮಂಗಳೂರು, ಡಿ.15: ಅಸೋಸಿಯೇಶನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ(ಎಪಿಐ)ದ ದ.ಕ ವಿಭಾಗವು ಡಿ.13ರಂದು ವೈದ್ಯರ ದಿನಾಚರಣೆಯನ್ನು ಮಂಗಳೂರಿನ ಐಎಂಎ ಹೌಸ್‌ನಲ್ಲಿ ಆಚರಿಸಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ಫಾ.ರಿಚರ್ಡ್ ಕುವೆಲ್ಹೊ ಈ ಕೋವಿಡ್‌ಪರಿಸ್ಥಿತಿಯು ವೈದ್ಯರನ್ನು ಕೋವಿಡ್ ಯೋಧರನ್ನಾಗಿ ಮಾಡಿದೆ ಎಂದರು. ನಿಖರವಾದ ರೋಗನಿರ್ಣಯವನ್ನು ಮಾಡುವಲ್ಲಿ ವೈದ್ಯರ ಪಾತ್ರ ಮತ್ತು ಅವರ ವೈದ್ಯಕೀಯ ಕೌಶಲ್ಯ ಹಾಗೂ ರೋಗಿಗಳ ಆರೈಕೆಯ ಕಡೆಗೆ ಅವರ ನಿಸ್ವಾರ್ಥ ಸೇವೆಯನ್ನು ಅವರು ಶ್ಲಾಘಿಸಿದರು.
ಹಿರಿಯ ವೈದ್ಯರಾದ ಡಾ.ಕೆ.ಸುಂದರ ಭಟ್, ಡಾ.ಪ್ರಭಾ ಅಧಿಕಾರಿ ಮತ್ತು ಡಾ.ಕಿಶೋರ್ ಕುಮಾರ್ ಉಬ್ರಂಗಳ ಅವರನ್ನು ನಿರಂತರ, ಸಮರ್ಪಿತ ಸೇವೆಗಾಗಿ ಸನ್ಮಾನಿಸಲಾಯಿತು. ಕೆಎಂಸಿ ಮಂಗಳೂರಿನ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅರ್ಚಿತ್ ಬೋಳೂರು ಅವರನ್ನು ವೈದ್ಯಕೀಯ ಪುಸ್ತಕ ಬರವಣಿಗೆಗಾಗಿ ‘ಅವಾರ್ಡ್ ಆಫ್ ಎಕ್ಸೆಲೆನ್ಸಿ’ ನೀಡಿ ಗೌರವಿಸಲಾಯಿತು.
ಎಪಿಐ ದ.ಕ ವಿಭಾಗದ ಅಧಿಕೃತ ಪ್ರಕಟನೆ ‘ಎಪಿಐ ದ.ಕ ಲಹರಿ’ ಇ-ಮ್ಯಾಗಝಿನ್‌ನ ಎರಡನೇ ಸಂಚಿಕೆಯನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು.
ಎಪಿಐ ದ.ಕ. ಇದರ ನಿಕಟಪೂರ್ವ ಅಧ್ಯಕ್ಷ ಹಾಗೂ ಕೆಎಂಸಿ ಮಂಗಳೂರಿನ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ.ಕ್ರಿಸ್ಟೋಫರ್ ಪಾಯ್ಸೋ ಮತ್ತು ಚುನಾಯಿತ ಅಧ್ಯಕ್ಷ ಡಾ.ಗಣೇಶ್ ಖಂಡಿಗೆ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಎಪಿಐ ದ.ಕ. ವಿಭಾಗದ ಅಧ್ಯಕ್ಷ ಡಾ.ವೆಂಕಟೇಶ್ ಬಿ.ಎಂ. ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಅರ್ಚನಾ ಭಟ್ ವಂದಿಸಿದರು.