×
Ad

ಪ್ರಣಬ್ ಮುಖರ್ಜಿ ಆತ್ಮಕಥೆ ಬಿಡುಗಡೆ ಕುರಿತು ಮಕ್ಕಳ ನಡುವೆ ಟ್ವಿಟರ್ ನಲ್ಲೇ ಜಗಳ!

Update: 2020-12-15 20:32 IST

ಹೊಸದಿಲ್ಲಿ,ಡಿ.15: ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯುವರ ಆತ್ಮಕಥೆಯ ನಾಲ್ಕನೇ ಭಾಗದ ಬಿಡುಗಡೆಯ ಕುರಿತಾದಂತೆ ಪ್ರಣಬ್ ಮಕ್ಕಳಾದ ಅಭಿಜಿತ್ ಮುಖರ್ಜಿ ಮತ್ತು ಶರ್ಮಿಷ್ಠಾ ಮುಖರ್ಜಿ ಮಧ್ಯೆ ಟ್ವಿಟರ್ ನಲ್ಲೇ ಕಾದಾಟ ಪ್ರಾರಂಭವಾಗಿದೆ.

ಪ್ರಣಬ್ ಮುಖರ್ಜಿಯವರ ಆತ್ಮಕಥೆಯ ಮೂರು ಭಾಗಗಳು ಈಗಾಗಲೇ ಬಿಡುಗಡೆಗೊಂಡಿದೆ. ಇದೀಗ ನಾಲ್ಕನೇ ಭಾಗವಾದ ‘ದಿ ಪ್ರೆಸಿಡೆನ್ಷಿಯಲ್ ಇಯರ್ಸ್ 2012-2017 ಬಿಡುಗಡೆ ಮಾಡಲಾಗುವುದು ಎಂದು ರೂಪಾ ಪಬ್ಲಿಕೇಷನ್ಸ್ ಕಳೆದ ವಾರ ಹೇಳಿಕೆ ನೀಡಿತ್ತು. ಆದರೆ ಈ ಕುರಿತು ಟ್ವೀಟ್ ಮಾಡಿದ ಪ್ರಣಬ್ ಪುತ್ರ ಅಭಿಜಿತ್ ಮುಖರ್ಜಿ, ಈ ಸಂಪುಟವನ್ನು ಬಿಡುಗಡೆ ಮಾಡುವ ಮುಂಚೆ ಪ್ರಕಾಶಕರು ಕಡ್ಡಾಯವಾಗಿ ತಮ್ಮ ಅನುಮತಿ ಪಡೆದೇ ಮುಂದುವರಿಯಬೇಕು, ಒಂದು ವೇಳೆ ನನ್ನ ತಂದೆ ಬದುಕಿದ್ದರೂ ಹೀಗೆಯೇ ಮಾಡುತ್ತಿದ್ದರು ಎಂದಿದ್ದರು.

ಈ ಟ್ವೀಟ್ ಗೆ ಕೂಡಲೇ ಪ್ರತಿಕ್ರಿಯಿಸಿದ ಪ್ರಣಬ್ ಪುತ್ರಿ ಶರ್ಮಿಷ್ಠಾ ಮುಖರ್ಜಿ, “ನೀನು ಈ ವಿಚಾರದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ. ನಮ್ಮ ತಂದೆ ರೋಗಪೀಡಿತರಾಗುವ ಮುಂಚೆಯೇ ಈ ಸಂಪುಟವನ್ನು ಬರೆದು ಪೂರ್ತಿಗೊಳಿಸಿದ್ದರು. ಇನ್ನು, ಈ ಪುಸ್ತಕದ ಹೆಸರು ‘ದಿ ಪ್ರೆಸಿಡೆನ್ಷಿಯಲ್ ಇಯರ್’ ಎಂದಿದೆಯೇ ಹೊರತು ‘ದಿ ಪ್ರೆಸಿಡೆನ್ಷಿಯಲ್ ಮೆಮ್ವಾ’ (Presidential Memoir) ಎಂದಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News