×
Ad

ಡಿ.17ರಿಂದ ಪಡುಬಿದ್ರೆ ಬ್ಲೂಫ್ಲಾಗ್ ಬೀಚ್ ಪ್ರವಾಸಿಗರ ಪ್ರವೇಶಕ್ಕೆ ಮುಕ್ತ

Update: 2020-12-15 21:06 IST

ಉಡುಪಿ, ಡಿ.15: ಮಿನಿಸ್ಟ್ರೀ ಆಫ್ ಎನ್ವಿರಾರ್ನಮೆಂಟ್, ಪಾರೆಸ್ಟ್ ಆ್ಯಂಡ್ ಕ್ಲೈಮೇಟ್ ಚೇಂಜ್ ಹಾಗೂ ಸೊಸೈಟಿ ಪಾರ್ ಇಂಟಿಗ್ರೇಟೆಡ್ ಕೋಸ್ಟಲ್ ಮ್ಯಾನೇಜ್‌ಮೆಂಟ್ ಇವರ ಸಹಯೋಗದೊಂದಿಗೆ ಜಿಲ್ಲಾಡಳಿತವು ಈಗಾಗಲೇ ಪಡುಬಿದ್ರಿ ಬೀಚ್‌ನಲ್ಲಿ ಪರಿಸರ ಮಂತ್ರಾಲಯದ ಬ್ಲೂಫ್ಲಾಗ್ ಸರ್ಟಿಫಿಕೇಶನ್ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ಪ್ರಸ್ತುತ ಈ ಕಡಲತೀರವು ಬ್ಲೂಪ್ಲಾಗ್ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಹೊಂದಿದ್ದು, ಈ ಕಡಲ ತೀರವನ್ನು ಡಿ.17ರಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.

ಪ್ರವಾಸಿಗರು ತಮ್ಮ ಪ್ರವಾಸಾನುಭೂತಿಗೆ ಹಾಗೂ ಕಡಲ ತೀರದ ಸುಂದರ ಚಟುವಟಿಕೆಗಳನ್ನು ಆಸ್ವಾದಿಸಲು ಪಡುಬಿದ್ರೆ ಎಂಡ್ ಪಾಯಿಂಟ್ ಬೀಚ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿದ ಸುಸಜ್ಜಿತ ಬೀಚ್‌ನ್ನಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಜಿಲ್ಲಾ ಪ್ರವಾ ಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News