ವ್ಯಕ್ತಿ ನಾಪತ್ತೆ
Update: 2020-12-15 21:23 IST
ಉಡುಪಿ, ಡಿ.15: ಜಿಲ್ಲೆಯ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಚಂದ್ರಾವತಿ ನಿಲಯ ನಿವಾಸಿ ಪದ್ಮನಾ ಕುಂದರ್ (59) ಎಂಬುವವರು ಡಿ.7 ರಿಂದ ನಾಪತ್ತೆಯಾಗಿದ್ದಾರೆ.
ಚಹರೆ: 5 ಅಡಿ 5 ಇಂಚು ಎತ್ತರವಿದ್ದು, ಸಾಮಾನ್ಯ ಶರೀರ, ಎಣ್ಣೆಕಪ್ಪು ಬಣ್ಣ ಹೊಂದಿದ್ದು, ಕನ್ನಡ, ತುಳು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪಡುಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ದೂ. ಸಂಖ್ಯೆ: 0820-2555452, 9480805450, ಕಾಪು ವೃತ್ತ ಪೊಲೀಸ್ ನಿರೀಕ್ಷಕರು ದೂ.ಸಂಖ್ಯೆ: 0820-2552133, ಉಡುಪಿ ಕಂಟ್ರೋಲ್ ರೂಂ ದೂ. ಸಂಖ್ಯೆ: 0820-2526444 ಅನ್ನು ಸಂಪರ್ಕಿಸುವಂತೆ ಪಡುಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ