×
Ad

ಗ್ರಾಪಂ ಚುನಾವಣೆ; ಮೊದಲ ಹಂತ: 3,854 ಅಭ್ಯರ್ಥಿಗಳು ಕಣದಲ್ಲಿ

Update: 2020-12-15 22:20 IST

ಮಂಗಳೂರು, ಡಿ.15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.22ರಂದು ಮೊದಲನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 3,854 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮಂಗಳೂರು 37, ಮೂಡುಬಿದಿರೆ 12, ಮತ್ತು ಬಂಟ್ವಾಳ 57 ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 106 ಗ್ರಾಪಂಗಳ 1,681 ಕ್ಷೇತ್ರಗಳಲ್ಲಿ 50 ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿ 1631 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ವರ್ಗವಾರು ಸಂಖ್ಯಾ ವಿವರ: ಅನುಸೂಚಿತ ಜಾತಿಯಲ್ಲಿ 238, ಅನುಸೂಚಿತ ಪಂಗಡದಲ್ಲಿ 215 ಹಾಗೂ ಹಿಂದುಳಿದ ‘ಎ’ ವರ್ಗದಲ್ಲಿ 958, ಹಿಂದುಳಿದ ‘ಬಿ’ ವರ್ಗದಲ್ಲಿ 226. ಸಾಮಾನ್ಯ 2,217, ಒಟ್ಟು 3,854 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News