×
Ad

ಅಡ್ಡೂರು: ಸ್ವಚ್ಛತಾ ಕಾರ್ಯಕ್ರಮ

Update: 2020-12-15 22:22 IST

ಮಂಗಳೂರು, ಡಿ.15: ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ ಕ್ಲಬ್ ವತಿಯಿಂದ ಅಡ್ಡೂರು ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಸ್ವಚ್ಛತಾ ಕಾರ್ಯವು ಕೇವಲ ಒಂದು ದಿನಕ್ಕೆ ಸೀಮಿತವಾ ಗಬಾರದು. ನಿತ್ಯವೂ ನಡೆಯುತ್ತಿರಬೇಕು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಶ್ರಮಿಸಬೇಕು. ಗ್ರಾಮ ಸ್ವಚ್ಛವಾದರೆ ಜಿಲ್ಲೆ, ರಾಜ್ಯ, ರಾಷ್ಟ್ರ ಸ್ವಚ್ಛಗೊಳ್ಳುತ್ತದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಎಫ್‌ಸಿಕೆ ಕ್ಲಬ್‌ನ ಅಧ್ಯಕ್ಷ ಅಲಿಯಾರ್ ಕೆಳಗಿನಕೆರೆ, ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ, ಉಪಾಧ್ಯಕ್ಷ ಝೈನುದ್ದೀನ್ ಗರಡಿ, ಎಂ.ಎಸ್. ಜಬ್ಬಾರ್, ಕ್ಲಬ್‌ನ ಸಲಹೆಗಾರರಾದ ಎ.ಕೆ. ಜಬ್ಬಾರ್, ಫಾರೂಕ್ ಕೆಳಗಿನಕೆರೆ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛಗೊಳಿಸಿ ತ್ಯಾಜ್ಯವನ್ನು ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು. ಕ್ಲಬ್‌ನ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News