ಎಸ್ಸೆಸ್ಸೆಫ್ ಪೇಟೆ ಶಾಖೆ: ನೂತನ ಪಧಾದಿಕಾರಿಗಳ ಆಯ್ಕೆ
ಉಳ್ಳಾಲ : ಎಸ್ಸೆಸ್ಸೆಫ್ ಪೇಟೆ ಶಾಖೆ ಇದರ ವಾರ್ಷಿಕ ಮಹಾಸಭೆಯು ಸೆಯ್ಯಿದ್ ಖುಬೈಬ್ ತಂಙಳ್ ಉದ್ಘಾಟಿಸಿದರು. ಶಿಹಾಬ್ ರವರ ಅಧ್ಯಕ್ಷತೆಯಲ್ಲಿ ಬಸ್ತಿಪಡಪ್ಪು ಇಶಾಕ್ ಪೇಟೆ ಅವರ ಮನೆಯಲ್ಲಿ ನಡೆಯಿತು.
ಈ ಸಂದರ್ಭ ಎಸ್ಸೆಸ್ಸೆಫ್ ಪೇಟೆ ಶಾಖೆ ಸಮಿತಿಗಳ ವಾರ್ಷಿಕ ಚಟುವಟಿಕಾ ವರದಿ ಮತ್ತು ಲೆಕ್ಕಪತ್ರ ಪೇಟೆ ಶಾಖೆಯ ಪ್ರಧಾನ ಕಾರ್ಯದರ್ಶಿ ಮೆಹರಾಲಿ ವಾಚಿಸಿ ಅಂಗೀಕರಿಸಾಯಿತು. ಶಾಖಾ ಚುಣಾವಣಾ ವೀಕ್ಷಕರಾದ ಹಾಶಿರ್ ಉಸ್ತಾದ್ ಕೋಡಿ ಇವರ ಉಸ್ತುವಾರಿಯಲ್ಲಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಮುಹಿಯುದ್ದೀನ್ ಶಾಕಿರ ಹಿಮಮಿ ಪೇಟೆ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಹನೀಫಿ, ಪ್ರಧಾನ ಕಾರ್ಯದರ್ಶಿಯಾಗಿ ಇರ್ಶಾದ್ ಪೇಟೆ, ಕಾರ್ಯದರ್ಶಿ ಮುಹಮ್ಮದ್ ತೌಸೀಫ್ ಪೇಟೆ ಮತ್ತು ಕೋಶಾಧಿಕಾರಿಯಾಗಿ ಮುಹಮ್ಮದ್ ಮುಶರಫ್ಇವರನ್ನು ಆಯ್ಕೆಮಾಡಲಾಯಿತು.
ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಮ್ಮದ್ ನಿಝಾಮ್, ರ್ಯಾಂಬೊ ಕನ್ವೀನರ್ ಆಗಿ ರಿಶಾನ್, ಮೀಡಿಯಾ ಕನ್ವೀನರ್ ಆಗಿ ಮುಹಮ್ಮದ್ ಶಾಬಿತ್ ಮತ್ತು ಇಶಾರ ಇಮ್ಯಾನ್ ಮೆಹರಾಲಿ ಇವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುನೀಸ್ ಇಸ್ಮಾಯಿಲ್, ಬಶೀರ್ ಹಿಲಾಲ್, ಉಮರ್ ರಹೀಸ್, ಅಮೀನ್, ಮುಹಮ್ಮದ್ ಫಾಸಿರ್ ಮತ್ತು ಸಹಾದ್ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಮುಹೀನ್ ಅಮ್ಜದಿ ಉಸ್ತಾದ್, ಶಬೀರ್ ಪೇಟೆ, ಇಶಾಕ್ ಪೇಟೆ, ರಮೀರ್ ಮೇಲಂಗಡಿ ಉಪಸ್ಥಿತರಿದ್ದರು. ಮುಹಿಯುದ್ದೀನ್ ಶಾಕಿರ ಹಿಮಮಿ ಪೇಟೆ ಸ್ವಾಗತಿಸಿವಂದಿಸಿದರು.