ಕೌನ್ ಬನೇಗಾ ಕರೋಡ್‌ಪತಿ : ಅನಾಮಯ 2000 ನಾಟೌಟ್
ಉಡುಪಿ, ಡಿ.15: ಬಾಲಿವುಡ್‌ನ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಸೋನಿ ಟಿವಿಯಲ್ಲಿ ನಡೆಸಿಕೊಡುವ ಜನಪ್ರಿಯ ಕ್ವಿಝ್ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿಯ ಸ್ಟುಡೆಂಟ್ ಸ್ಪೆಷಲ್‌ನ ಹಾಟ್‌ಸೀಟ್‌ನಲ್ಲಿ ಕುಳಿತಿರುವ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಏಳನೇ ತರಗತಿ ವಿದ್ಯಾರ್ಥಿ ಅನಾಮಯ ಯೋಗೀಶ್ ದಿವಾಕರ್ ಇಂದು ಎರಡು ಪ್ರಶ್ನೆಗಳಿಗೆ ಸರಿಯುತ್ತರ ನೀಡಿ 2000 ಪಾಯಿಂಟ್ ಗೆದ್ದಿದ್ದು ಆಟವನ್ನು ನಾಳೆಗೆ ಕಾದಿರಿಸಿದ್ದಾರೆ.
ದಿನದ ಕೊನೆಯ ಹಂತದಲ್ಲಿ ನಾಲ್ಕು ಮಂದಿ ಸ್ವರ್ದಿಗಳಲ್ಲಿ ವೇಗವಾಗಿ ಸರಿಯುತ್ತರ ನೀಡಿ ಹಾಟ್‌ಸೀಟ್‌ನಲ್ಲಿ ಕುಳಿತುಕೊಳ್ಳಲು ಅರ್ಹತೆ ಪಡೆದ ಅನಾಮಯ ಇಂದು ಕೇಳಿದ ಆರಂಭಿಕ ಸುತ್ತಿನ ಎರಡು ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಿದರು.
ಅಮಿತಾಬ್ ಕೇಳಿದ ಮೊದಲ ಪ್ರಶ್ನೆ ಮೊಬೈಲ್ ಖರೀದಿಸುವಾಗ ಒಟ್ಟಿಗೆ ದೊರೆಯದ ವಸ್ತು ಸೆಲ್ಫಿ ಸ್ಟಿಕ್ ಎಂದು ಉತ್ತರಿಸಿದರು.
ಎರಡನೇ ಪ್ರಶ್ನೆ ಯಾವ ಆಟದಲ್ಲಿ ತಂಡದ ಯಾರೊಬ್ಬರೂ ಹೆಲ್ಮೆಟ್ ಧರಿಸುವುದಿಲ್ಲ ಎಂದು ಕೇಳಿದ ಪ್ರಶ್ನೆಗೆ ಬಾಸ್ಕೆಟ್‌ಬಾಲ್ ಎಂದು ಅನಾಮಯ ಉತ್ತರಿಸಿದರು.
ಅಲ್ಲಿಗೆ ಇಂದಿನ ಸಮಯ ಮುಗಿದಿದ್ದು ನಾಳೆ ರಾತ್ರಿ 9 ಗಂಟೆ ಮುಂದುವರಿಯಲಿದೆ.