ಡ್ರಗ್ಸ್ ವಿರುದ್ಧ ಅಭಿಯಾನ : ಡಿ.18ರಂದು ಪೊಲೀಸ್ ಆಯುಕ್ತರಿಂದ ವಿಶೇಷ ಫೋನ್ ಇನ್
Update: 2020-12-16 17:18 IST
ಮಂಗಳೂರು, ಡಿ. 16: ಡ್ರಗ್ಸ್ ವಿರುದ್ಧದ ಅಭಿಯಾನದ ಅಂಗವಾಗಿ ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರು ಡಿ. 18ರಂದು ವಿಶೇಷ ಫೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ.
ಕಾರ್ಯಕ್ರಮ ಬೆಳಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ನಡೆಯಲಿದ್ದು, ದೂ.ಸಂ. 08242220801 ಆಗಿರುತ್ತದೆ ಎಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.