×
Ad

ಬಿವಿಟಿಯಿಂದ ಬ್ಯುಟಿಷನ್ ಕೋರ್ಸ್‌ಗೆ ಅರ್ಜಿ ಅಹ್ವಾನ

Update: 2020-12-16 19:00 IST

ಮಣಿಪಾಲ, ಡಿ.16: ಆಸಕ್ತ ಯುವತಿಯರಿಗೆ ಮುಂದಿನ ಜ.4ರಿಂದ 9ರವರೆಗೆ ಬ್ಯುಟಿಷನ್ ಕೋರ್ಸ್‌ನಲ್ಲಿ ಬ್ರೈಡಲ್ ಹಾಗೂ ಮೆಹಂದಿ ತರಬೇತಿ ಯನ್ನು ಶಿವಳ್ಳಿಯಲ್ಲಿರುವ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ತರಬೇತಿಯು ಪ್ರತಿದಿನ ಪೂರ್ವಾಹ್ನ ಮಾತ್ರ ಇರುತ್ತದೆ. 18ರಿಂದ 30 ವರ್ಷ ದವರೆಗಿನವರಿಗೆ ಭಾಗವಹಿಸಲು ಅವಕಾಶವಿದೆ. ತರಬೇತಿಯಲ್ಲಿ 20ರಿಂದ 25 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ತರಬೇತಿ ಸಮಯದಲ್ಲಿ ಉಚಿತ ಊಟದ ವ್ಯವಸ್ಥೆ ಇದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ವಯಸ್ಸು, ದೂರವಾಣಿ ಸಂಖ್ಯೆ ಮತ್ತು ವಿದ್ಯಾರ್ಹತೆಯನ್ನು ಬಿಳಿ ಹಾಳೆಯಲ್ಲಿ ಬರೆದು ಡಿ.30ರೊಳಗೆ ಭಾರತೀಯ ವಿಕಾಸ ಟ್ರಸ್ಟ್, ‘ಅನಂತ’, ಪೆರಂಪಳ್ಳಿ, ಅಂಬಾಗಿಲು ರಸ್ತೆ, ಕುಂಜಿಬೆಟ್ಟು, ಅಂಚೆ ಉಡುಪಿ-576102 ಈ ವಿಳಾಸಕ್ಕೆ ಕಳುಹಿಸಿಕೊಡ ಬಹುದು. ಅಥವಾ ದೂರವಾಣಿ ಸಂಖ್ಯೆ (0820) 2570263ನ್ನು ಸಂಪರ್ಕಿಸಿ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಬಹುದು ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News