×
Ad

ಸುಲ್ತಾನ್ ಗೋಲ್ಡ್: ‘ವಿಶ್ವ ವಜ್ರ’ ಡೈಮಂಡ್ ಎಕ್ಸಿಬಿಷನ್‌ಗೆ ಚಾಲನೆ

Update: 2020-12-16 19:31 IST

ಮಂಗಳೂರು, ಡಿ.16: ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ವತಿಯಿಂದ ನಗರದ ಕಂಕನಾಡಿ ಬೈಪಾಸ್ ರಸ್ತೆಯ ಮಳಿಗೆಯಲ್ಲಿ ಆಯೋಜಿಸಲಾದ ‘ವಿಶ್ವ ವಜ್ರ’ ಡೈಮಂಡ್ ಎಕ್ಸಿಬಿಷನ್‌ಗೆ ಬುಧವಾರ ಸಂಜೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ವಜ್ರಾಭರಣಗಳ ಇಟಾಲಿಯನ್ ಕಲೆಕ್ಷನ್‌ನ್ನು ಎಸ್‌ಎಂಆರ್ ಗ್ರೂಪ್‌ನ ಚೇರ್‌ಮನ್ ಎಸ್.ಎಂ. ರಶೀದ್ ಹಾಜಿ, ಬೆಲ್ಜಿಯಂ ಕಲೆಕ್ಷನ್‌ನ್ನು ಮಾಂಡೋವಿ ಮೋಟಾರ್ಸ್‌ನ ಡೈರೆಕ್ಟರ್ ಎ.ಸಂಜಯ್ ರಾವ್, ಟರ್ಕಿಶ್ ಕಲೆಕ್ಷನ್‌ನ್ನು ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿಯ ಡೈರೆಕ್ಟರ್ ಮುಹ್ಮಮದ್ ಅಶ್ರಫ್, ಮಿಡಲ್ ಈಸ್ಟ್ ಕಲೆಕ್ಷನ್‌ನ್ನು ಹೈಸಮ್ ಸ್ಟೀಲ್ಸ್‌ನ ಪಾರ್ಟ್ನರ್ ಅಹ್ಮದ್ ಶಕೀರ್ ಎಂ., ಫ್ರೆಂಚ್ ಕಲೆಕ್ಷನ್‌ನ್ನು ಮಂಗಳೂರು ಲೈಮ್ ಆ್ಯಂಡ್ ಮರೈನ್ ಇಂಡಸ್ಟ್ರೀಸ್‌ನ ಮ್ಯಾನೇಜಿಂಗ್ ಪಾರ್ಟ್ನರ್ ಬಿ.ಎಂ. ಮುಮ್ತಾಝ್ ಅಲಿ, ಸಿಂಗಾಪೂರ್ ಕಲೆಕ್ಷನ್‌ನ್ನು ಕೆ. ಮುಹಮ್ಮದ್ ಅಶ್ರಫ್, ಸಾಲಿಟೈರ್ ಕಲೆಕ್ಷನ್‌ನ್ನು ಗೊಲ್ತಮ್ ಅಜಾಲ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹನೀಫ್ ಹಾಜಿ, ಯು.ಎಸ್. ಕಲೆಕ್ಷನ್‌ನ್ನು ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ.ಟಿ.ಎಂ. ಅಬ್ದುಲ್ ರವೂಫ್ ಲೋಕಾರ್ಪಣೆಗೊಳಿಸಿದರು.

‘ವಿಶ್ವ ವಜ್ರ’ ಡೈಮಂಡ್ ಎಕ್ಸಿಬಿಷನ್‌ಗೆ ಚಾಲನೆ ನೀಡಿ ಮಾತನಾಡಿದ ಎ.ಜೆ. ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್‌ನ ಚೇರ್‌ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಎ.ಜೆ. ಶೆಟ್ಟಿ, ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯಿಂದ ಪ್ರತಿವರ್ಷವೂ ಡೈಮಂಡ್ ಎಕ್ಸಿಬಿಷನ್ ಆಯೋಜಿಸುತ್ತಾ ಬರಲಾಗುತ್ತಿದೆ. ನವನವೀನ ವಿನ್ಯಾಸಗಳ ವಜ್ರಗಳನ್ನು ಪರಿಚಯಿಸುತ್ತಿದೆ. ಅತ್ಯುತ್ತಮ ಗುಣಮಟ್ಟದ ಆಭರಣಗಳ ಮಹಾ ಸಂಗ್ರಹವೇ ಇಲ್ಲಿದೆ ಎಂದರು.

ಸಂಸ್ಥೆಯು ಕೇವಲ ಆಭರಣ ಸಂಸ್ಥೆಯಾಗಿ ಮಾತ್ರವಷ್ಟೇ ಉಳಿಯದೇ ಸಮಾಜ ಸೇವೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿದೆ. ಕಡುಬಡವರಿಗೆ ಸಹಾಯ ಮಾಡುತ್ತಾ ಅಭಿವೃದ್ಧಿ, ಜನಪರ ಕೆಲಸಗಳನ್ನು ಮಾಡುತ್ತಾ ಬರಲಾಗುತ್ತಿದೆ. ಸಂಸ್ಥೆಯು ಇನ್ನಷ್ಟು ಬೆಳೆದು ಯಶಸ್ಸು ಕಾಣಲಿ ಎಂದು ಅವರು ಶುಭ ಹಾರೈಸಿದರು.

ಸಮಾರಂಭದಲ್ಲಿ ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಅಬ್ದುಲ್ ಸತ್ತಾರ್, ಅಸಿಸ್ಟೆಂಟ್ ಮ್ಯಾನೇಜರ್ ಮುಸ್ತಫಾ ಕಕ್ಕಿಂಜೆ, ಸೇಲ್ಸ್ ಮ್ಯಾನೇಜರ್ ಫೈಝಲ್ ಮತ್ತಿತರರು ಉಪಸ್ಥಿತರಿದ್ದರು. ಲವಿಟಾ ಮೆನೆಜಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಭಾರೀ ರಿಯಾಯಿತಿ: ಸಂಸ್ಥೆಯಿಂದ ಆಯೋಜಿಸಿರುವ ಪ್ರದರ್ಶನವು ಇದು ದಕ್ಷಿಣ ಭಾರತದ ಮನಮೋಹಕ ವಜ್ರಾಭರಣಗಳ ಪ್ರದರ್ಶನವಾಗಿದೆ. ಮುಂಬೈ, ಬೆಂಗಳೂರುಗಳಂತಹ ಮೆಟ್ರೋ ಸಿಟಿಗಳಲ್ಲಿ ಆಯೋಜಿಸುತ್ತಿದ್ದ ಪ್ರದರ್ಶನಗಳನ್ನು ಮಂಗಳೂರಿನಲ್ಲೂ ಹಮ್ಮಿಕೊಂಡು, ವಜ್ರಾಭರಣ ಪ್ರಿಯರಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಡೈಮಂಡ್ ಕ್ಯಾರೆಟ್‌ಗಳ ಖರೀದಿಯ ಮೇಲೆ 7,500 ರೂ. ರಿಯಾಯಿತಿ ಕಲ್ಪಿಸಲಾ ಗಿದೆ. ಡಿ.16ರಿಂದ ಆರಂಭಗೊಂಡು 31ರವರೆಗೆ ಮನಮೋಹಕ ಪ್ರದರ್ಶನವು ನಡೆಯಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News