ಸಿಟಿ ಗೋಲ್ಡ್‌ನಿಂದ ‘ಮೆಗಾ ಮಂಗಳೂರು ಫೆಸ್ಟ್' : 3ನೇ ವಾರದ ಲಕ್ಕೀ ಡ್ರಾ ಸಮಾರಂಭ
ಮಂಗಳೂರು, ಡಿ.16: ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್‌ನ 20ನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿನ ಸಿಟಿ ಗೋಲ್ಡ್ ಮಳಿಗೆಯಲ್ಲಿ ಡಿಸೆಂಬರ್‌ವರೆಗೆ ‘ಮೆಗಾ ಮಂಗಳೂರು ಫೆಸ್ಟ್’ ಆಯೋಜಿಸಿದೆ. ಈ ಪ್ರಯುಕ್ತ ಮೂರನೇ ವಾರದ ಲಕ್ಕೀ ಡ್ರಾ ಸಮಾರಂಭವನ್ನು ಬುಧವಾರ ಸಂಜೆ ಹಮ್ಮಿಕೊಳ್ಳಲಾಯಿತು.
ಮೂರನೇ ಲಕ್ಕೀ ಡ್ರಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಸಂಸ್ಥೆಯು ಆಭರಣ ಸಂಸ್ಥೆಯಾಗಿ ಅಪಾರ ಜನಮನ್ನಣೆಗೆ ಪಾತ್ರವಾಗಿದೆ. ಸಮಾಜ ಸೇವೆಯಲ್ಲೂ ಗುರುತಿಸಿಕೊಳ್ಳುವ ಮೂಲಕ ಬಡವರಿಗೆ ಆಸರೆಯಾಗಿ ನಿಂತಿದೆ. ತನ್ನ ಆದಾಯದಲ್ಲಿ ಬಡವರಿಗೆ ಡೈಮಂಡ್ ರಿಂಗ್‌ನ್ನು ಉಚಿತವಾಗಿ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಗ್ರಾಹಕರಿಗೆ ಯಾವುದೇ ಆಮಿಷ ಒಡ್ಡದೇ ವ್ಯಾಪಾರ-ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡಿಕೊಂಡಿದೆ ಎಂದರು.
ಹಜಾಜ್ ಗ್ರೂಪ್ಸ್‌ನ ಪಾರ್ಟ್ನರ್ ಜಿ. ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ, ಸಿಟಿ ಗೋಲ್ಡ್ ಸಂಸ್ಥೆಯು ವಿವಿಧ ಬಗೆಯಲ್ಲಿ ಸಮಾಜ ಸೇವೆ ನೀಡುತ್ತಿದೆ. ಬಡವರಿಗೆ ಉಚಿತವಾಗಿ ಮನೆ ಕಟ್ಟಿಸಿಕೊಡುವುದು, ಸಾಮೂಹಿಕ ಮದುವೆ ಕಾರ್ಯಕ್ರಮ ಆಯೋಜಿಸುವ ಮೂಲಕ ವಿಭಿನ್ನ ಸೇವೆ ಮಾಡುತ್ತಿದೆ. ಅಲ್ಲದೆ, ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿದೆ. ಇದನ್ನು ಉಳಿದ ಸಂಸ್ಥೆಗಳು ಪಾಲಿಸುವಂತಾಗಲಿ. ಅದೃಷ್ಟಶಾಲಿಗಳಿಗೆ ಸಿಟಿ ಗೋಲ್ಡ್‌ನಿಂದ ಡೈಮಂಡ್ ರಿಂಗ್ ನೀಡುತ್ತಿರುವುದು ಶ್ಲಾಘನೀಯ. ಗ್ರಾಹಕರಿಗೆ ಕೊಡುಗೆ ನೀಡುವ ಪರಂಪರೆ ಮುಂದುವರಿಯಲಿ. ಸಂಸ್ಥೆಯು ತನ್ನ ವ್ಯಾಪಾರ-ವಹಿವಾಟನ್ನು ವೃದ್ಧಿಗೊಳಿಸಲಿ ಎಂದು ಶುಭ ಹಾರೈಸಿದರು.
ಮೂರನೇ ವಾರದ ಲಕ್ಕೀ ಡ್ರಾದ ಅದೃಷ್ಟಶಾಲಿಯಾಗಿ ಝುಬೈದಾ ಫಳ್ನೀರ್ ಆಯ್ಕೆಯಾದರು. ಇದೇ ಸಂದರ್ಭ ಎರಡನೇ ಲಕ್ಕಿ ಡ್ರಾ ವಿಜೇತ ಅಹ್ಮದ್ ಹಾರಿಸ್ ನೀರುಮಾರ್ಗ ಅವರಿಗೆ ಸಮಾರಂಭಕ್ಕೆ ಆಗಮಿಸಿದ ಮುಖ್ಯಅತಿಥಿಗಳು ಡೈಮಂಡ್ ರಿಂಗ್‌ನ್ನು ಉಡುಗೊರೆಯಾಗಿ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖಾದರ್ ಹಾಜಿ ಉಳ್ಳಾಲ್, ರಫೀಕ್ ಕಲ್ಲಡ್ಕ ಪಾಲ್ಗೊಂಡಿದ್ದರು.
ಈ ಸಂದರ್ಭ ಸಿಟಿಗೋಲ್ಡ್ ಸಂಸ್ಥೆಯ ಮ್ಯಾನೇಜರ್ ಅಹ್ಮದ್ ಹಾಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ., ಸಂಸ್ಥೆಯ ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಉಪಸ್ಥಿತರಿದ್ದರು.
ಬಂಪರ್ ಬಹುಮಾನ: ಸಿಟಿ ಗೋಲ್ಡ್‌ನ ಮೆಗಾ ಮಂಗಳೂರು ಫೀಸ್ಟ್ ಅಂಗವಾಗಿ ಗ್ರಾಹಕರಿಗೆ ಬಂಪರ್ ಬಹುಮಾನಗಳನ್ನು ಪ್ರಕಟಿಸಲಾ ಗುತ್ತಿದೆ. ಎಕ್ಸ್‌ಕ್ಲೂಸಿವ್ ಡೈಮಂಡ್ ನೆಕ್ಲೆಸ್‌ನ್ನು ಬಂಪರ್ ಬಹುಮಾನವಾಗಿ ಗೆಲ್ಲುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.
ವೀಕ್ಲಿ ಲಕ್ಕೀ ಡ್ರಾ: ಸಿಟಿ ಗೋಲ್ಡ್‌ನಿಂದ ಗ್ರಾಹಕರಿಗಾಗಿ ಹಲವು ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು, ಪ್ರತೀ ವಾರವೂ ಲಕ್ಕೀ ಡ್ರಾ ಹಮ್ಮಿಕೊಳ್ಳಲಾಗಿದೆ. ನೊರಾ ಇಟಾಲಿಯನ್ ಕಲೆಕ್ಷನ್ಸ್, ಕೆನ್ನಾ ಯುನಿಕ್ ಡೈಮಂಡ್ಸ್ ಪ್ರದರ್ಶನ, ಮಾರಾಟವನ್ನು ಆಯೋಜಿಸಲಾಗುತ್ತಿದೆ.
ಮೇಕಿಂಗ್ ಚಾರ್ಜೆಸ್ ಕಡಿತ: ಗೋಲ್ಡ್‌ನಲ್ಲಿ ಶೇ.55, ಡೈಮಂಡ್ಸ್‌ನಲ್ಲಿ ಶೇ.25, ಅನ್‌ಕಟ್ ಆಭರಣಗಳಲ್ಲಿ ಶೇ.25 ರಷ್ಟು ಕಡಿತದ ಸೌಲಭ್ಯ ವನ್ನು ಸಂಸ್ಥೆ ಒದಗಿಸುತ್ತಿದೆ. ಅಲ್ಲದೆ, ಬೆಲೆಬಾಳುವ ನೆಕ್ಲೇಸ್ ಮೇಲೆ ಯಾವುದೇ ರೀತಿಯ ಮೇಕಿಂಗ್ ಚಾರ್ಜೆಸ್ ಇರುವುದಿಲ್ಲ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.