×
Ad

ಧರೆಗೆ ಉರುಳುವ ಭೀತಿಯಲ್ಲಿರುವ ಮರದ ರಕ್ಷಣೆಗೆ ಆಗ್ರಹ

Update: 2020-12-16 21:36 IST

ಮಣಿಪಾಲ, ಡಿ.16: ಪೆರಂಪಳ್ಳಿ ಶೀಂಬ್ರ ರಸ್ತೆ ಅಗಲೀಕರಣ ಕಾಮಗಾರಿಯ ಕಾರಣಕ್ಕಾಗಿ ಧರೆಗೆ ಉರುಳುವ ಭೀತಿಯಲ್ಲಿರುವ ಅಶ್ವಥ ವೃಕ್ಷವನ್ನು ಸಂಬಂಧ ಪಟ್ಟ ಇಲಾಖೆಯವರು ರಕ್ಷಿಸುವಂತೆ ಪರಿಸರಪ್ರೇಮಿಗಳು ಆಗ್ರಹಿಸಿದ್ದಾರೆ.

ಈ ರಸ್ತೆಯ ಇಂದಿರಾ ಶಿವರಾಮ್ ಪಾಲಿಟೆಕ್ನಿಕ್ ಕಾಲೇಜು ಬಳಿ ರಸ್ತೆ ನಡುವಿನಲ್ಲಿ ಹಚ್ಚ ಹಸಿರಾಗಿ ಹೆಮ್ಮರವಾಗಿ ಬೆಳೆದು ನಿಂತಿರುವ ಅಶ್ವಥ ವೃಕ್ಷ ಇದೀಗ ರಸ್ತೆ ಕಾಮಗಾರಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಕಡಿಯ ಲಾಗು್ತದೆ ಎಂಬ ದೂರುಗಳು ಕೇಳಿ ಬಂದಿವೆ.

ಮರವನ್ನು ಯಾವುದೇ ಕಾರಣಕ್ಕೂ ಕಡಿಯಲು ಮುಂದಾಗಬಾರದು. ಮರ ಇರುವ ಸ್ಥಳದಲ್ಲಿಯೇ ರಸ್ತೆ ದ್ವಿಪಥಗೊಳಿಸಿ, ರಸ್ತೆ ವಿಭಾಜಕದಲ್ಲಿ ಮರವನ್ನು ರಕ್ಷಿಸಲು ಸಾಧ್ಯವಿದೆ. ಇಲ್ಲದಿದ್ದರೆ ಮರವನ್ನು ಆಯಾಕಟ್ಟಿನ ಸುರಕ್ಷಿತ ಸ್ಥಳದಲ್ಲಿ ನೆಟ್ಟು, ಮರವನ್ನು ರಕ್ಷಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News