×
Ad

ನಕಲಿ ಉದ್ಯೋಗದ ಆಮಿಷಕ್ಕೆ ಒಳಗಾಗದಂತೆ ಸೂಚನೆ

Update: 2020-12-16 21:54 IST

ಉಡುಪಿ, ಡಿ.16: ಕೆಲವು ವ್ಯಕ್ತಿಗಳು ಎನ್‌ಪಿಸಿಐಎಲ್ (ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಪ್ ಇಂಡಿಯಾ ಲಿ) ಕೈಗಾ ವೆಬ್‌ಸೈಟ್‌ನ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ, ನಕಲಿ ಉದ್ಯೋಗ ಭರವಸೆ ನೀಡಿ, ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ಸುಳ್ಳು ಇ-ಮೇಲ್‌ ಗಳನ್ನು ಹಾಗೂ ದೂರವಾಣಿ ಕರೆಗಳನ್ನು ಮಾಡುತ್ತಿದ್ದು, ಇಂತಹ ಯಾವುದೇ ವ್ಯಕ್ತಿಗಳಿಂದ ಹಣ ಪಾವತಿಸುವಂತೆ ಇ-ಮೇಲ್ ಅಥವಾ ದೂರವಾಣಿ ಕರೆಗಳು ಬಂದಲ್ಲಿ ಅದಕ್ಕೆ ಪ್ರತಿಕ್ರಿಯಿಸದಂತೆ ಸಂಸ್ಥೆ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದೆ.

ಇಂತಹ ಆಮಿಷ ಒಡ್ಡುವ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಈ ರೀತಿಯ ಆಮಿಷಕ್ಕೆ ಬಲಿಯಾಗಿ ಹಣ ಕಳೆದುಕೊಂಡಲ್ಲಿ ಸಂಸ್ಥೆ ಜವಾಬ್ದಾರಿಯಾಗುವುದಿಲ್ಲ ಎಂದು ತಿಳಿಸಲಾಗಿದೆ.

ಕೈಗಾದ ಎನ್‌ಪಿಸಿಐಎಲ್ ಮೆರಿಟ್ ಆಧಾರದ ಮೇಲೆ ಉದ್ಯೋಗಾಕಾಂಕ್ಷಿ ಗಳನ್ನು ಆಯ್ಕೆ ಮಾಡುತ್ತಿದ್ದು, ಉದ್ಯೋಗಾಕಾಂಕ್ಷಿಗಳಿಂದ ಯಾವುದೇ ಹಣವನ್ನಾಗಲಿ, ಠೇವಣಿಯನ್ನಾಗಲಿ ಸ್ವೀಕರಿಸುವುದಿಲ್ಲ. ಈ ನಿಗಮದ ಯಾವುದೇ ಉದ್ಯೋಗಗಳ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ (www.npcilcareers.co.in) ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ -recrute.kgs@npcil.co.in - ಸಂಪರ್ಕಿಸುವಂತೆ ಎನ್‌ಪಿಸಿಐಎಲ್ ಕೈಗಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News