ಮಂಗಳೂರು: 'ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್' ಅಲ್ಟ್ರಾ ಮಾಡರ್ನ್ ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ
ಮಂಗಳೂರು : ಇನ್‌ಲ್ಯಾಂಡ್ ಬಿಲ್ಡರ್ಸ್‌ನ ಅಲ್ಟ್ರಾ ಮಾಡರ್ನ್ ವಾಣಿಜ್ಯ ಯೋಜನೆಯಾದ ‘ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್’ನ ಶಿಲಾನ್ಯಾಸ ಕಾರ್ಯಕ್ರಮವು ನಗರದ ಬಿಜೈಯಲ್ಲಿ ಸರ್ವಧರ್ಮ ಸಂಪ್ರದಾಯದಂತೆ ಧಾರ್ಮಿಕ ಪೂಜೆ, ದುಆ, ಪ್ರಾರ್ಥನೆಯೊಂದಿಗೆ ನಡೆಯಿತು.
‘ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್’ ತಳ, ನೆಲಮಹಡಿ ಮತ್ತು 4 ಆಂತಸ್ತುಗಳನ್ನು ಹೊಂದಿದೆ. ಮುಂಬೈನ ತಜ್ಞ ವಾಸ್ತುಶಿಲ್ಪಿಗಳು ಹಲವಾರು ನವೀನ ಕಟ್ಟಡ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಕಟ್ಟಡವನ್ನು ವಿನ್ಯಾಸಗೊಳಿಸಿದ್ದಾರೆ. ಈ ಮಳಿಗೆಯು ಉತ್ತಮವಾದ ಕಾರ್ ಪಾರ್ಕ್, 2 ಲಿಫ್ಟ್, ವಿಶಾಲ ಹಾಗೂ ಭವ್ಯವಾದ ಲಾಬಿ ಮತ್ತು ಕಡಿಮೆ ಇಂಧನ ಶಕ್ತಿದಕ್ಷತೆಯ ವ್ಯವಸ್ಥೆಯನ್ನು ಹೊಂದಿದೆ. ಇದೇ ಸಂದರ್ಭ ದಲ್ಲಿ ಅತಿಥಿಗಳು ಯೋಜನೆಯ ಮಾಹಿತಿ ಪುಸ್ತಕ ವನ್ನು ಬಿಡುಗಡೆಗೊಳಿಸಿದರು.
ಅರ್ಚಕರಾದ ಗಿರಿಧರ ಭಟ್ ಪೂಜಾ ವಿಧಿಗಳನ್ನು ನಡೆಸಿದರು, ಸುರತ್ಕಲ್ ಈದ್ಗಾ ಮಸೀದಿಯ ಖತೀಬ್ ಪಿ.ಎಸ್. ಮುಹಮ್ಮದ್ ಖಾಮಿಲ್ ಸಖಾಫಿ ದುಆ ನೆರವೇರಿಸಿದರು. ಕ್ರೈಸ್ತ ಧರ್ಮ ಗುರುಗಳಾದ ವಂ.ಜೆ.ಬಿ.ಸಲ್ದಾನ ಆಶೀರ್ಚನ ನೀಡಿ ಶುಭ ಹಾರೈಸಿದರು.
ಬೆಳೆಯುತ್ತಿರುವ ಮಂಗಳೂರಿಗೆ ಕೊಡುಗೆ
ಇನ್‌ಲ್ಯಾಂಡ್ ಬಿಲ್ಡರ್ಸ್ ಸಂಸ್ಥೆ ನಗರದಲ್ಲಿ ಉತ್ತಮ ವಿನ್ಯಾಸದ ಕಟ್ಟಡಗಳನ್ನು ನಿರ್ಮಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಇದೀಗ ಮತ್ತೊಂದು ವಾಣಿಜ್ಯ ಸಂಕೀರ್ಣ ನಿರ್ಮಿಸುವ ಮೂಲಕ ಮಂಗಳೂರಿಗೆ ಕೊಡುಗೆ ನೀಡುತ್ತಿರುವುದಕ್ಕೆ ಅವರಿಗೆ ಶುಭ ಕೋರುವುದಾಗಿ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ನಿರ್ದೇಶಕರಾದ ಸಿವಿಲ್ ಇಂಜಿನಿಯರ್ ಮೆರಾಜ್ ಯೂಸುಫ್ ಸಿರಾಜ್ ಮತ್ತು ಆರ್ಕಿಟೆಕ್ಚರ್ ಪದವೀಧರರಾದ ವಹಾಜ್ ಯೂಸುಫ್ ಸಿರಾಜ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಹಾಗೂ ಉದ್ಯಮಿ ಅಜಿತ್ ಕುಮಾರ್ ರೈ ಮಾಲಾಡಿ, ಅತಿಥಿಗಳಾದ ಸುಧೀರ್ ಶೆಟ್ಟಿ, ಜಯಪ್ರಕಾಶ್, ಪಂಕಜ್ ಶೆಟ್ಟಿ, ನೀನಾ ಶೆಟ್ಟಿ, ಉಮೇಶ್ ಪುತ್ರನ್, ದಿಲೀಪ್, ರೇಣುಕಾ ಚೌಟ, ಪ್ರೊಜೆಕ್ಟ್ ಇಂಜಿನಿಯರ್ ವಿನ್ಯಾಸ್, ಗುತ್ತಿಗೆದಾರ ಮಹಾಬಲ ಮೊದಲಾದವರು ಉಪಸ್ಥಿತರಿದ್ದರು.
ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಬಿಜೈ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಕೆಎಸ್ಸಾರ್ಟಿಸಿ ಮತ್ತು ಭಾರತ್ ಮಾಲ್‌ಗೆ ಅತ್ಯಂತ ಸಮೀಪದಲ್ಲಿದೆ. ಈ ಪ್ರದೇಶವು ಎಂ.ಜಿ. ರೋಡ್ ಮತ್ತು ವಿಮಾನ ನಿಲ್ದಾಣದ ನಡುವಿನ ಪ್ರಮುಖ ಮಾರ್ಗವಾಗಿದ್ದು ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ವಾಣಿಜ್ಯ ಕೇಂದ್ರವಾಗಿದೆ.
ಹೆಚ್ಚಿನ ಮಾಹಿತಿಗಾಗಿ www.inlandbuilders.net http://www.inlandbuilders.net ನ್ನು ಅಥವಾ ದೂ.ಸಂ.9880138015, 9972089099, 9972014055 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.