×
Ad

ಕೃಷಿ ಮಸೂದೆಗಳ ಪ್ರತಿಗಳನ್ನು ಹರಿದುಹಾಕಿದ ಅರವಿಂದ್ ಕೇಜ್ರಿವಾಲ್

Update: 2020-12-17 17:39 IST

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ನಡೆದ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳ ಪ್ರತಿಗಳನ್ನು ಹರಿದುಹಾಕಿದರು.  ಬ್ರಿಟಿಷರಿಗಿಂತಲೂ ಕೆಟ್ಟವರಾಗಬಾರದು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

ಕೊರೋನ ವೈರಸ್ ಸಾಂಕ್ರಾಮಿಕ ಕಾಯಿಲೆ ವಿಪರೀತ ಮಟ್ಟದ್ದಲ್ಲಿದ್ದಾಗ ಕೃಷಿ ಕಾನೂನುಗಳನ್ನು ಜಾರಿಗೊಳಿಸುವ ಆತುರ ಏನಿತ್ತು? ನಾನು ಈ ವಿಧಾನಸಭೆಯಲ್ಲಿ ಮೂರು ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದುಹಾಕುತ್ತೇನೆ. ಬ್ರಿಟಿಷರಿಗಿಂತ ಹೆಚ್ಚು ಕೆಟ್ಟವರಾಗಬಾರದು ಎಂದು ವಿನಂತಿಸುತ್ತೇನೆ ಎಂದು ರೈತರ ಪ್ರತಿಭಟನೆ ಕುರಿತು ಚರ್ಚಿಸಲು ಕರೆದಿರುವ ಅಧಿವೇಶನದಲ್ಲಿ ಕೇಜ್ರಿವಾಲ್ ಹೇಳಿದ್ದಾರೆ.

ಪ್ರತಿಯೊಬ್ಬ ರೈತನೂ ಭಗತ್ ಸಿಂಗ್ ಆಗಿ ಮಾರ್ಪಟ್ಟಿದ್ದಾನೆ..ನಾನು ರೈತರನ್ನು ಸಂಪರ್ಕಿಸಿ ಕೃಷಿ ಕಾನೂನುಗಳ ಲಾಭಗಳನ್ನು ತಿಳಿಸಲು ಯತ್ನಿಸುವುದಾಗಿ ಸರಕಾರ ಹೇಳುತ್ತಿದೆ. ನಿಮ್ಮ ಭೂಮಿಯನ್ನು ಕಸಿದುಕೊಳ್ಳುವುದಿಲ್ಲವಾಗಿದ್ದರಿಂದ ನಿಮಗೆ ಲಾಭವಾಗಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಹೇಳುತ್ತಾರೆ. ಅದೊಂದು ಲಾಭವೇ? ಎಂದು ಕೇಜ್ರಿವಾಲ್ ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News