×
Ad

ಉಡುಪಿ: 2ನೇ ಹಂತದ ಗ್ರಾಪಂ ಚುನಾವಣೆಗೆ 3380 ನಾಮಪತ್ರ

Update: 2020-12-17 19:46 IST

ಉಡುಪಿ, ಡಿ.17: ಜಿಲ್ಲೆಯ ಕುಂದಾಪುರ, ಕಾರ್ಕಳ ಹಾಗೂ ಕಾಪು ತಾಲೂಕು ವ್ಯಾಪ್ತಿಯ ಒಟ್ಟು 86 ಗ್ರಾಪಂಗಳಿಗೆ ಡಿ.27ರಂದು ನಡೆಯುವ ಎರಡನೇ ಹಂತದ ಚುನಾವಣೆಗಾಗಿ ಒಟ್ಟು 3380 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ. 1898 ಪುರುಷರು ಹಾಗೂ 1482 ಮಹಿಳೆಯರು ಈ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಕುಂದಾಪುರ ತಾಲೂಕಿನ 43 ಗ್ರಾಪಂಗಳ 554 ಸ್ಥಾನಗಳಿಗೆ 905 ಪುರುಷರು, 674 ಮಹಿಳೆಯರು ಸೇರಿದಂತೆ 1579 ಮಂದಿ, ಕಾರ್ಕಳ ತಾಲೂಕಿನ 27 ಗ್ರಾಪಂಗಳ 399 ಸ್ಥಾನಗಳಿಗೆ 564 ಪುರುಷರು, 467 ಮಹಿಳೆಯರು ಸೇರಿದಂತೆ ಒಟ್ಟು 1031 ಮಂದಿ ಹಾಗೂ ಕಾಪು ತಾಲೂಕಿನ 16 ಗ್ರಾಪಂಗಳ ಒಟ್ಟು 290 ಸ್ಥಾನಗಳಿಗೆ 429 ಪುರುಷರು 341 ಮಹಿಳೆಯರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಪರಿಶಿಷ್ಟ ಜಾತಿಯ 257 ಮಂದಿ (48 ಪುರುಷರು+209 ಮಹಿಳೆಯರು), ಪರಿಶಿಷ್ಟ ಪಂಗಡದ 214 ಮಂದಿ (24+190), ಹಿಂದುಳಿದ ವರ್ಗ ‘ಎ’ಗೆ ಸೇರಿದ 775 (379+396), ಹಿಂದುಳಿದ ವರ್ಗ ‘ಬಿ’ಗೆ ಸೇರಿದ 177 (89+ 88) ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ 1957 (1358+599) ಮಂದಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News