ಇಸ್ರೋದ ಸಿಎಂಎಸ್-01 ಸಂವಹನ ಉಪಗ್ರಹದ ಯಶಸ್ವಿ ಉಡಾವಣೆ

Update: 2020-12-17 17:03 GMT

ಶ್ರೀಹರಿಕೋಟ(ಆಂ.ಪ್ರ),ಡಿ.7: ಭಾರತವು ಗುರುವಾರ ಇಲ್ಲಿಯ ಉಡಾವಣಾ ಕೇಂದ್ರದಿಂದ ತನ್ನ ಅತ್ಯಾಧುನಿಕ ಸಂವಹನ ಉಪಗ್ರಹ ಸಿಎಂಎಸ್-01 ಅನ್ನು ಪಿಎಸ್‌ಎಲ್‌ವಿ-ಸಿ50 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಇದು ಕೊರೋನ ವೈರಸ್ ಸಾಂಕ್ರಾಮಿಕದ ನಡುವೆ ಇಸ್ರೋದ ಈ ವರ್ಷದ ಎರಡನೇ ಮತ್ತು ಅಂತಿಮ ಉಪಗ್ರಹ ಉಡಾವಣೆಯಾಗಿದೆ.

ನಭಕ್ಕೆ ಚಿಮ್ಮಿದ ಸುಮಾರು 20 ನಿಮಿಷಗಳ ಬಳಿಕ ಪಿಎಸ್‌ಎಲ್‌ವಿ ಉಪಗ್ರಹವನ್ನು ನಿಗದಿತ ಕಕ್ಷೆಗೆ ಕರಾರುವಕ್ಕಾಗಿ ಸೇರಿಸಿತು.

ಸಿಎಂಎಸ್-01 ಇಸ್ರೋದ 42ನೇ ಸಂವಹನ ಉಪಗ್ರಹವಾಗಿದ್ದು,ಭಾರತ,ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷದ್ವೀಪ ನಡುಗಡ್ಡೆಗಳ ವ್ಯಾಪ್ತಿಯಲ್ಲಿ ವಿಸ್ತರಿತ ಸಿ-ಬ್ಯಾಂಡ್ ಸಂಪರ್ಕ ಸೇವೆಗಳನ್ನು ಒದಗಿಸಲಿದೆ. ಅದು 11 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಲಾಗಿದ್ದ ಸಂವಹನ ಉಪಗ್ರಹ ಜಿಸ್ಯಾಟ್-12ರ ಬದಲು ಕಾರ್ಯ ನಿರ್ವಹಿಸಲಿದೆ. ಅದು ಏಳು ವರ್ಷಕ್ಕೂ ಅಧಿಕ ಜೀವಿತಾವಧಿಯನ್ನು ಹೊಂದಿರಲಿದೆ.

ಮಿಷನ್ ಕಂಟ್ರೋಲ್ ಸೆಂಟರ್‌ನಿಂದ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಇಸ್ರೋ ನಿರ್ದೇಶಕ ಕೆ.ಶಿವನ್ ಅವರು,ಉಪಗ್ರಹವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ನಾಲ್ಕು ದಿನಗಳಲ್ಲಿ ಅದು ಭೂಸ್ಥಿರ ವರ್ಗಾವಣೆ ಕಕ್ಷೆಯಲ್ಲಿ ನಿರ್ದಿಷ್ಟ ಸ್ಥಾನದಲ್ಲಿ ಸೇರಿಸಲ್ಪಡಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News