ಮಾಸ್ಕ್ ನಿರಾಕರಿಸಿದ ಪ್ರಧಾನಿ ಮೋದಿಯನ್ನು ಟ್ರೋಲ್ ಮಾಡಿದ ಆಪ್

Update: 2020-12-17 18:11 GMT

ಹೊಸದಿಲ್ಲಿ,ಡಿ.17: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಸ್ಕ್ ಧರಿಸದ ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದ್ದು, ಈ ವೀಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಆಮ್ ಆದ್ಮಿ ಪಕ್ಷ ಪ್ರಧಾನಿಯನ್ನು ಟ್ರೋಲ್ ಮಾಡಿದೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಸುತ್ತಲಿದ್ದವರೆಲ್ಲಾ ಮಾಸ್ಕ್ ಧರಿಸಿದ್ದರೂ, ಪ್ರಧಾನಿ ಮಾಸ್ಕ್ ಧರಿಸಿರಲಿಲ್ಲ. ಮಳಿಗೆಯೊಂದರಲ್ಲಿ ಮಾಸ್ಕ್ ನೀಡಿದರೂ ಕೂಡಾ ಪ್ರಧಾನಿ ಅದನ್ನು ಸ್ವೀಕರಿಸಲಿಲ್ಲ. ಈ ವೀಡಿಯೋವನ್ನು ಪೋಸ್ಟ್ ಮಾಡಿದ ಆಪ್ ಪಕ್ಷ, ‘ಮೋದೀಜಿಯಂತೆ ಆಗಬೇಡಿ, ಮಾಸ್ಕ್ ಧರಿಸಿ ಎಂದು’ ವ್ಯಂಗ್ಯವಾಡಿದೆ. ಕಾರ್ಯಕ್ರಮ ನಡೆದ ಸ್ಥಳ ಮತ್ತು ದಿನಾಂಕದ ಕುರಿತು ಇನ್ನೂ ಮಾಹಿತಿ ಲಭಿಸಿಲ್ಲ ಎಂದು ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News