ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕ: 131ನೇ ಸ್ಥಾನಕ್ಕೆ ಕುಸಿದ ಭಾರತ

Update: 2020-12-18 07:25 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್‍ಡಿಪಿ) ಬಿಡುಗಡೆಗೊಳಿಸಿರುವ 2020ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ 2018ಗೆ ಹೋಲಿಸಿದಾಗ ಎರಡು ಸ್ಥಾನಗಳಷ್ಟು ಕೆಳಕ್ಕೆ ಕುಸಿದು 189 ದೇಶಗಳ ಪೈಕಿ 131ನೇ ಸ್ಥಾನದಲ್ಲಿದೆ. ಒಂದು ದೇಶದ ಶಿಕ್ಷಣ, ಆರೋಗ್ಯ ಮತ್ತು ಜೀವನ ಗುಣಮಟ್ಟದ ಆಧಾರದಲ್ಲಿ ಈ ಸೂಚ್ಯಂಕವನ್ನು ನಿಗದಿ ಪಡಿಸಲಾಗುತ್ತದೆ.

ಭಾರತಕ್ಕಿಂತ ಈ ಪಟ್ಟಿಯಲ್ಲಿ ಭೂತಾನ್ ಮುಂದಿದೆ. ಭೂತಾನ್ 129ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 133, ನೇಪಾಳ 142 ಹಾಗೂ ಪಾಕಿಸ್ತಾನ 154ನೇ ಸ್ಥಾನದಲ್ಲಿದೆ. ಈ ಸೂಚ್ಯಂಕದಲ್ಲಿ ನಾರ್ವೆ ಪ್ರಥಮ ಸ್ಥಾನ ಪಡೆದಿದ್ದು ನಂತರದ ಸ್ಥಾನಗಳು ಐಯಲ್ರ್ಯಾಂಡ್, ಸ್ವಿಝಲ್ರ್ಯಾಂಡ್, ಹಾಂಕಾಂಗ್ ಮತ್ತು ಐಸ್ ಲ್ಯಾಂಡ್‍ಗೆ ಹೋಗಿವೆ.

ಭಾರತ ಈ ಪಟ್ಟಿಯಲ್ಲಿ ಎರಡು ಸ್ಥಾನಗಳಷ್ಟು ಕೆಳಗೆ ಕುಸಿದಿರುವ ಕುರಿತು ಪ್ರತಿಕ್ರಿಯಿಸಿದ ಯುಎನ್‍ಡಿಪಿ ಅಧಿಕಾರಿ ಶೋಕೋ ನೋಡ, "ಭಾರತದ ನಿರ್ವಹಣೆ ಚೆನ್ನಾಗಿಲ್ಲ ಎಂದರ್ಥವಲ್ಲ, ಆದರೆ ಇತರ ದೇಶಗಳು ಚೆನ್ನಾಗಿ ನಿರ್ವಹಿಸಿವೆ,'' ಎಂದು ಹೇಳಿದರು.

ಈ 2020ರ ಮಾನವ ಅಭಿವೃಧ್ಧಿ ವರದಿ ಪ್ರಕಾರ 2019ರಲ್ಲಿ ಭಾರತೀಯರ ನಿರೀಕ್ಷಿತ ಜೀವಿತಾವಧಿ 69.2 ವರ್ಷ ಆಗಿದ್ದರೆ ಬಾಂಗ್ಲಾದೇಶದಲ್ಲಿ ಇದು 72.6 ವರ್ಷಗಳು ಹಾಗೂ ಪಾಕಿಸ್ತಾನದಲ್ಲಿ 67.3 ವರ್ಷಗಳಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News