×
Ad

ಹತ್ರಾಸ್ ಪ್ರಕರಣದಲ್ಲಿ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈಯಲಾಗಿದೆ: ಸಿಬಿಐ ಚಾರ್ಜ್ ಶೀಟ್

Update: 2020-12-18 14:49 IST

ಹತ್ರಾಸ್,ಡಿ.18: ಉತ್ತರಪ್ರದೇಶದ ಹತ್ರಾಸ್ ಎಂಬಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈಯಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವರದಿ ಸಲ್ಲಿಸಿದೆ. ಪ್ರಕರಣ ನಡೆದು ಮೂರು ತಿಂಗಳಾದ ಬಳಿಕ ಸಿಬಿಐ ಈ ಕುರಿತು ಚಾರ್ಜ್ ಶೀಟ್ ಸಲ್ಲಿಸಿದ್ದು, ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈಯಲಾಗಿದೆ ಎಂದು ಹೇಳಿದ್ದಾಗಿ ndtv.com ವರದಿ ಮಾಡಿದೆ.

ಯುವತಿಯನ್ನು ದಾಖಲಿಸಲಾಗಿದ್ದ ಆಸ್ಪತ್ರೆಯ ವೈದ್ಯರ ಹೇಳಿಕೆಗಳನ್ನೂ ಪಡೆದು, ಫೊರೆನ್ಸಿಕ್ ಪರೀಕ್ಷೆಗಳನ್ನೂ ನಡೆಸಿರುವ ತನಿಖಾ ತಂಡವು ದೆಹಲಿಯಿಂದ 200ಕಿ.ಮೀ ದೂರದಲ್ಲಿರುವ ಹತ್ರಾಸ್ ನ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ/ಪಂಗಡ ದೌಜರ್ನ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.

ಸೆ.14ರಂದು ಮೇಲ್ಜಾತಿಗೆ ಸೇರಿದ ನಾಲ್ವರು ಯುವಕರು ಯುವತಿಯೋರ್ವಳನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದರು. ಯುವತಿಯು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಮೃತಪಟ್ಟ ಯುವತಿಯ ಮೃತದೇಹವನ್ನು ಪೊಲೀಸರು ತರಾತುರಿಯಲ್ಲಿ, ಕುಟುಂಬದ ಅನುಮತಿಯನ್ನೂ ಪಡೆಯದೇ ಸಂಸ್ಕಾರ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News