×
Ad

ಪ್ರಧಾನಿ ಮೋದಿಯ ವಾರಣಾಸಿ ಕಚೇರಿಯನ್ನು ಒಎಲ್ಎಕ್ಸ್ ನಲ್ಲಿ ಮಾರಾಟಕ್ಕಿಟ್ಟ ವ್ಯಕ್ತಿ!

Update: 2020-12-18 15:20 IST
www.indiatoday.in

ವಾರಣಾಸಿ,ಡಿ.18: ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿಯಲ್ಲಿರುವ ಕಚೇರಿಯನ್ನು ಒಎಲ್ಎಕ್ಸ್ ನಲ್ಲಿ ಮಾರಾಟಕ್ಕಿಟ್ಟ ಘಟನೆ ನಡೆದಿದೆ. ಏಳೂವರೆ ಕೋಟಿ ರೂ.ಗೆ ಕಚೇರಿಯನ್ನುಮಾರಾಟಕ್ಕಿಟ್ಟಿದ್ದು, ಇದು ಯಾರ ಕೃತ್ಯವೆಂದು ಇದುವರೆಗೂ ತಿಳಿದು ಬಂದಿಲ್ಲ. ಕಚೇರಿಯ ಫೋಟೊವನ್ನು ಲಗತ್ತಿಸಿ ಕೆಲವು ಮಾಹಿತಿಗಳನ್ನೂನೀಡಲಾಗಿದೆ. ಸದ್ಯ ಪೊಲೀಸರು ಈ ಕೃತ್ಯದ ಹಿಂದಿರುವ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ ಎಂದು indiatoday.com ವರದಿ ಮಾಡಿದೆ.

ಜಾಹೀರಾತಿನಲ್ಲಿ ಪ್ರಧಾನಿಯ ವಾರಾಣಾಸಿ ಕಚೇರಿಯನ್ನು ವಿಲ್ಲಾ ಎಂದು ನಮೂದಿಸಲಾಗಿದೆ. ನಾಲ್ಕು ಬೆಡ್ ರೂಮ್, ನಾಲ್ಕು ಬಾತ್ ರೂಮ್, 6,500 ಚದರ ಅಡಿ ವಿಸ್ತೀರ್ಣವಿದೆ ಎಂದು ನಮೂದಿಸಲಾಗಿದ್ದು, ಸದ್ಯ ಪೊಲೀಸರು ಜಾಹೀರಾತನ್ನು ಅಳಿಸಿದ್ದಾರೆ. ಪ್ರಕರಣದ ಸಂಬಂಧ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News