ಮೊದಲ ಟೆಸ್ಟ್: ಭಾರತ ವಿರುದ್ಧ ಆಸ್ಟ್ರೇಲಿಯಕ್ಕೆ ಭರ್ಜರಿ ಜಯ
Update: 2020-12-19 13:38 IST
ಅಡಿಲೇಡ್: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ ಸುಲಭ ಗುರಿ ಪಡೆದ ಆಸ್ಟ್ರೇಲಿಯ 8 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.
ಮೂರನೇ ದಿನದಾಟವಾದ ಶನಿವಾರ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತವನ್ನು ಕೇವಲ 36 ರನ್‌ಗೆ ನಿಯಂತ್ರಿಸಿದ್ದ ಆಸ್ಟ್ರೇಲಿಯ ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಗೆಲ್ಲಲು 90 ರನ್ ಗುರಿ ಪಡೆದಿತ್ತು. ಆಸ್ಟ್ರೇಲಿಯ 21 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿ ಗೆಲುವಿನ ನಗೆ ಬೀರಿತು. 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಜೋ ಬರ್ನ್ಸ್ ಔಟಾಗದೆ 51 ರನ್(63 ಎಸೆತ, 7 ಬೌಂಡರಿ, 1 ಸಿಕ್ಸರ್)ಗಳಿಸಿ ಗೆಲುವನ್ನು ಮತ್ತಷ್ಟು ಸರಳವಾಗಿಸಿದರು.ಮ್ಯಾಥ್ಯೂ ವೇಡ್ ರನೌಟಾಗುವ ಮೊದಲು 33 ರನ್ ಗಳಿಸಿದರು.