×
Ad

ಕಾಸರಗೋಡು : ಮೆಡಿಕಲ್ ಶಾಪ್, ತರಕಾರಿ ಅಂಗಡಿಯಿಂದ ಕಳವು

Update: 2020-12-19 16:09 IST

ಕಾಸರಗೋಡು : ಮೆಡಿಕಲ್  ಶಾಪ್ ಮತ್ತು ತರಕಾರಿ ಅಂಗಡಿಗೆ ನುಗ್ಗಿ ನಗದು ಕಳವುಗೈದ ಘಟನೆ ಕಾಸರಗೋಡು ನಗರದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಎಂ . ಜಿ ರಸ್ತೆಯಲ್ಲಿರುವ ಟಿ.ಎ  ಅಬ್ದುಲ್ಲ ಅವರ ಮಾಲಕತ್ವದ  ಮೆಡಿಕಲ್ ಶಾಪ್  ಮತ್ತು ಸಮೀಪ ಇರುವ ವಿಜಯನ್  ಎಂಬವರ ತರಕಾರಿ ಅಂಗಡಿಗೆ ನುಗ್ಗಿ ಕೃತ್ಯ ನಡೆಸಲಾಗಿದೆ. ಎರಡೂ ಅಂಗಡಿಯ ಹಿಂಬದಿಯ ಗೋಡೆ ಕೊರೆದು ಈ ಕೃತ್ಯ ನಡೆಸಲಾಗಿದೆ. ಬೆಳಗ್ಗೆ ಬಾಗಿಲು ತೆರೆದು ಒಳ ಬಂದ ಬಳಿಕ  ಕೃತ್ಯ ಬೆಳಕಿಗೆ ಬಂದಿದೆ.

ಮೆಡಿಕಲ್ ಶಾಪ್ ನಲ್ಲಿದ್ದ 60 ಸಾವಿರ ರೂ . ನಗದು ಮತ್ತು ಅಂಗಡಿಯಲ್ಲಿದ್ದ ಆರು ಸಾವಿರ ರೂ . ನಗದು  ಕಳವು ಮಾಡಲಾಗಿದೆ . ಕಾಸರಗೋಡು ನಗರ  ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News